ಕಲ್ಪ ಮೀಡಿಯಾ ಹೌಸ್ | ಮೈಸೂರು |
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಮೈಸೂರು ಶಾಖೆಯಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ಜುಲೈ 13ರ ಬೆಳಗ್ಗೆ ಭಕ್ತರಿಗೆ ತಪ್ತ ಮುದ್ರಾಧಾರಣೆ ನೀಡಲಿದ್ದಾರೆ.
ಅಂದು ಬೆಳಗ್ಗೆ 7 ರಿಂದ 9:30ರವರೆಗೆ ಮೈಸೂರಿನ ಅಗ್ರಹಾರದಲ್ಲಿರುವ ಉತ್ತರಾದಿ ಮಠದ ರೋಗಮೋಚನ ಶ್ರೀ ಧನ್ವಂತರಿ ದೇವಾಲಯದಲ್ಲಿ ಮುದ್ರಾ ಧಾರಣೆ ನೆರವೇರಲಿದೆ.
ಬೆಳಗ್ಗೆ 10 ರಿಂದ 11 ರವರೆಗೆ ಶ್ರೀರಾಮಪುರದ ಉತ್ತರಾದಿ ಮಠದ ಶಾಖೆಯಾದ ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಶ್ರೀ ಸತ್ಯಾತ್ಮತೀರ್ಥರು ಮುದ್ರಾ ಧಾರಣೆಯನ್ನು ನೀಡಲಿದ್ದಾರೆ.
Also read: ರಾಜ್ಯದಿಂದ ಕಾಶಿಗೆ ಭಾರತ್ ಗೌರವ್ ರೈಲು: ಸಚಿವೆ ಶಶಿಕಲಾ ಜೊಲ್ಲೆ
ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಉತ್ತರಾದಿ ಮಠದ ವ್ಯವಸ್ಥಾಪಕ ಅನಿರುದ್ಧಾಚಾರ್ಯ ಪಾಂಡುರಂಗಿ ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಮೊ:9448147459ಗೆ ಸಂಪರ್ಕಿಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















