ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೊನೆಗೂ ವಿಶ್ವ ಯಾವ ಭೀತಿಯನ್ನು ಎದುರಿಸುತಿತ್ತೋ ಅದು ನಿಜವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, #Russia president Vladimir Putin ಉಕ್ರೇನ್ ವಿರುದ್ದ ಅಧಿಕೃತವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ಇಂದು ಬೆಳಿಗ್ಗೆ ಘೋಷಿಸಿದ್ದಾರೆ. ಈ ಮೂಲಕ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ದ ಸಾಧ್ಯತೆಯ ಅತಂಕವು ಇಂದು ನಿಜವಾಗಿದೆ .
ಅಮೆರಿಕಾ, ಐರೋಪ್ಯ ಒಕ್ಕೂಟಗಳ ವಿರೋಧದ ನಡುವೆಯೂ ರಷ್ಯಾ, ಉಕ್ರೇನ್ ಯುದ್ದ ಸಾರಿದೆ. ಯುದ್ದ ಘೋಷಿಸಿರುವ ರಷ್ಯಾ ಅಧ್ಯಕ್ಷ ಉಕ್ರೇನ್ ಸೈನಿಕರಲ್ಲಿ ಶಶ್ತ್ರ ತ್ಯಜಿಸುವಂತೆ ಮನವಿ ಮಾಡಿದ್ದಾರೆ ಈ ಹಿಂದೆ ಅಂದರೇ ಸೋವಿಯತ್ ಒಕ್ಕೂಟ ಛಿಧ್ರ ಛಿಧ್ರ ಆಗುವ ಮೊದಲು ಉಕ್ರೇನ್ #Ukraine ರಷ್ಯಾದ ಭಾಗವೇ ಆಗಿತ್ತು . ಇದೀಗ ತಮ್ಮಿಂದ ಸಿಡಿದು ಹೋದ ಭೂಭಾಗದ ವಿರುದ್ದ ರಷ್ಯಾ ಸಂಸತ್ತಿನ ಒಪ್ಪಿಗೆ ಪಡೆದು ಯುದ್ದ ಘೋಷಣೆ ಮಾಡಿದೆ.
ವಿಶ್ವದ ಹಲವು ದೇಶಗಳು ಉಕ್ರೆನ್ ಬೆಂಬಲಕ್ಕೆ ನಿಂತಿರುವುದರಿಂದ ಮೂರನೇ ವಿಶವ ಯುದ್ದದ ಕಾರ್ಮೋಡವು ಜಗತ್ತನ್ನು ಅವರಿಸಿದೆ. ಇದಕ್ಕೂ ಮೊದಲು ರಷ್ಯಾ ಜೊತೆಗಿನ ಯುದ್ದ ಸಾಧ್ಯತೆಯ ಹಿನ್ನಲೆಯಲ್ಲಿ ಉಕ್ರೇನ್ ಸರ್ಕಾರ ಪೂರ್ವ ಉಕ್ರೇನ್ ನಲ್ಲಿ ವಿಮಾನ ನಿಲ್ದಾಣಗಳನ್ನು ಮಧ್ಯರಾತ್ರಿಯಿಂದ ಮುಚ್ಚಿದೆ. ರಷ್ಯಾದ ವಾಯುಯಾನ ಅಧಿಕಾರಿಗಳು ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು “ಅಪಾಯಕಾರಿ ಪ್ರದೇಶಗಳು” ಎಂದು ಘೋಷಿಸಿದ್ದರು.
ಪೂರ್ವ ಉಕ್ರೇನ್‌ನ ವಾಯುಪ್ರದೇಶದಲ್ಲಿ ನಾಗರಿಕ ವಾಯು ಸಂಚಾರವನ್ನು ರಷ್ಯಾ ನಿಷೇಧಿಸಿದ ನಂತರ ಉಕ್ರೇನ್ ಈ ನಿರ್ಧಾರಕ್ಕೆ ಬಂದಿದೆ. ಕಳೆದ ವಾರ, ಇಲ್ಲಿನ ಪೈಲಟ್ ಗೆ ಎಚ್ಚರಿಕೆ ನೀಡಿದ್ದ ಉಕ್ರೇನ್ ವಾಯುಯಾನ ಅಧಿಕಾರಿಗಳು ವಾಯುಯಾನ ಪ್ರದೇಶಗಳ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವ ರಷ್ಯಾ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿರಿಸುವಂತೆ ಮತ್ತು ಉಕ್ರೇನ್ ನ ನಿಯಂತ್ರಕರನ್ನು ಮಾತ್ರ ಗುರುತಿಸುವಂತೆ ಎಚ್ಚರಿಕೆ ನೀಡಿದ್ದರು.
ರಷ್ಯಾದ ಕಡೆಯಿಂದ ಯುದ್ಧದ ಬೆದರಿಕೆ ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ನಿನ್ನೆ ತಡ ರಾತ್ರಿ ಉಕ್ರೇನ್ ನ ಅಧ್ಯಕ್ಷ ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿಕೊಂಡಿದ್ದರು ಹಾಗೂ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಮನವಿಯನ್ನು ಒಪ್ಪಿಕೊಳ್ಳಲಿಕ್ಕಿಲ್ಲ ಎಂದು ಹೇಳಿದ್ದಾರೆ.
ನಿನ್ನೆ ತಡರಾತ್ರಿ ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶದ ಜನತೆಯನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿ, ದೇಶವು ರಷ್ಯಾಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂಬ ರಷ್ಯಾ ಆರೋಪವನ್ನು ನಿರಾಕರಿಸಿದರು, ರಷ್ಯಾದ ಆಕ್ರಮಣವು ಹತ್ತಾರು ಸಾವಿರ ಜೀವಗಳನ್ನು ಕಳೆದುಕೊಳ್ಳುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
Also read: ಶಿವಮೊಗ್ಗ ನಗರದಾದ್ಯಂತ ಫೆ.26ರವರೆಗೆ ನಿಷೇಧಾಜ್ಞೆ ವಿಸ್ತರಣೆ : ಜಿಲ್ಲಾಧಿಕಾರಿ ಆದೇಶ
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ರಷ್ಯಾಕ್ಕೆ ಸಂದೇಶ ನೀಡಿದ ಅವರು, ಉಕ್ರೇನ್ ನ ಜನತೆ ಮತ್ತು ಸರ್ಕಾರ ಶಾಂತಿಯನ್ನು ಬಯಸುತ್ತಿದೆ, ಆದರೆ ದೇಶಕ್ಕೆ ದಾಳಿಯ ಧಕ್ಕೆಯುಂಟಾದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ, ನಮಗೆ ಆಗ ಯುದ್ಧ ಅನಿವಾರ್ಯವಾಗುತ್ತದೆ. ತಾವು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ, ಮೌನವಾಗಿದ್ದಾರೆ ಎಂದರು.
ಯುದ್ದ ಘೋಷಣೆಯ ಬಳಿಕ ರಷ್ಯಾ ವಿರುದ್ದ ಬಹುತೇಕ ದೇಶಗಳು ನಿರ್ಬಂಧ ವಿಧಿಸುವುದು ಖಚಿತವಾಗಿದೆ.ರಷ್ಯಾ – ಉಕ್ರೇನ್ ನಡುವಿನ ಬಿಕ್ಕಟ್ಟು ಹಿನ್ನಲೆಯಲ್ಲಿ ಇದರ ಪರಿಣಾಮ ಭಾರತದ ಮೇಲೂ ಆಗಲಿದೆ ಎನ್ನಲಾಗಿದೆ. ಅದರಲ್ಲೂ ಆರ್ಥಿಕ ಪರಿಸ್ಥಿತಿ ಮೇಲೆ ಈ ಬಿಕ್ಕಟ್ಟು ಸಾಕಷ್ಟು ಪ್ರಭಾವ ಬೀರಲಿದೆ. ತೈಲ ಬೆಲೆ ಏರಿಕೆ ಜೊತೆಗೆ ಚಿನ್ನಾಭರಣಗಳ ಬೆಲೆಯೂ ಇನ್ನಷ್ಟು ಹೆಚ್ಚಳವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post