ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ಆರಂಭದಲ್ಲಿಯೇ ರೈತ ಸಮುದಾಯಕ್ಕೆ ಬಂಪರ್ ಘೋಷಿಸಲಾಗಿದೆ.
ಲೋಕಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ರೈತ ಸಮುದಾಯಗಳಿಗೆ ಹಲವು ಕೊಡುಗೆ ನೀಡಿದ್ದಾರೆ. ರೈತರಿಂದ 1200ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ ಘೋಷಿಸಿದ್ದು, ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡುವುದಾಗಿ ತಿಳಿಸಿದ್ದಾರೆ.
ಈ ಮೂಲಕ ತೈಲ ಆಮದು ಕಡಿತಗೊಳಿಸಿ ದೇಶದಲ್ಲಿಯೇ ತೈಲ ಉತ್ಪಾದನೆ ತಯಾರಿಕೆಗೆ ಒತ್ತು ನೀಡಲಾಗುತ್ತದೆ ಎಂದಿದ್ದಾರೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಧುನಿಕ ಮತ್ತು ಆರ್ಗ್ಯಾನಿಕ್ ಕೃಷಿಗೆ ಒತ್ತು ನೀಡುವಂತಹ ಸಂಶೋಧನೆ ಹಾಗೂ ಪಠ್ಯಗಳ ರಚನೆಗೆ ಒತ್ತು ನೀಡುವುದಾಗಿ ಘೋಷಿಸಿದ್ದಾರೆ.
MSP ನಲ್ಲಿ ರೈತರಿಂದ ದಾಖಲೆಗಳನ್ನು ಖರೀದಿಸಲಾಗುತ್ತದೆ ರೈತರಿಗೆ ಎಂಎಸ್‌ಪಿ ದರದಲ್ಲಿ ರೈತರಿಂದ ದಾಖಲೆಯ ಖರೀದಿ ಮಾಡಲಾಗುವುದು. ರಾಜ್ಯ ಸರ್ಕಾರಗಳು ತಮ್ಮ ಪಠ್ಯಕ್ರ ಮದಲ್ಲಿ ರೂಪಿಸುವ ಕೋರ್ಸ್ ಅನ್ನು ಸೇರಿಸಲು ಪ್ರೋತ್ಸಾಹಿಸಲಾಗುವುದು. ಗಂಗಾ ಕಾರಿಡಾರ್ ಸುತ್ತಮುತ್ತ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post