ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಅನುಮೋದನೆ ನೀಡಿದ್ದು, ಮಂಡನೆ ಆರಂಭವಾಗಿದೆ.
ಇದಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಔಪಚಾರಿಕವಾಗಿ ಬಜೆಟ್’ಗೆ ಅನುಮೋದನೆ ಪಡೆದುಕೊಂಡರು.ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಸರಿಯಾಗಿ 11 ಗಂಟೆಗೆ ಬಜೆಟ್ ಮಂಡನೆಯನ್ನು ಆರಂಭಿಸಿದ್ದಾರೆ.
ಭಾಷಣ ಆರಂಭದ ಹೈಲೈಟ್ಸ್ ಇಲ್ಲಿದೆ:
- ಮುಂದಿನ 25 ವರ್ಷ ದೂರದೃಷ್ಠಿಯ ಬಜೆಟ್
- ಆತ್ಮನಿರ್ಭರ ಭಾರತ್ ಅಡಿಯಲ್ಲಿ 16 ಲಕ್ಷ ಉದ್ಯೋಗ ಸೃಷ್ಠಿ
- ಪಿಎಂ ಗತಿ ಶಕ್ತಿ ದೇಶದ ಆರ್ಥಿಕತೆಗೆ ವೇಗ ನೀಡಲಿದೆ
- ದೇಶದ ಆರ್ಥಿಕತೆ ವೇಗ ಹಲವು ಪಟ್ಟು ಹೆಚ್ಚಳ
- ಭಾರತದ ಆರ್ಥಿಕತೆಯನ್ನು ಎಳೆಯಲು 7 ಎಂಜಿನ್’ಗಳ ಶಕ್ತಿ
- ಎಲ್’ಐಸಿಯಿಂದ ಬಂಡವಾಳ ಹಿಂತೆಗತ
- ಉತ್ಪಾದಕತೆ ಹೆಚ್ಚಳ, ರೈಲು, ರಸ್ತೆ, ಏರ್’ಪೋರ್ಟ್‌ಗಳ ಸಂಖ್ಯೆ ಹೆಚ್ಚಳ
- 25 ಸಾವಿರ ಕೋಟಿ ರೂ. ಹೆಚ್ಚುವರಿ ಬಂಡವಾಳ ಹೂಡಿಕೆ
- ರಸ್ತೆ ನಿರ್ಮಾಣಕೆಕ ಹೆಚ್ಚಿನ ಆದ್ಯತೆ ನೀಡಿಕೆ
- ವೇಗೆ ಸುರಕ್ಷಿತ ಸಾಗಾಣಿಕೆಗೆ ಪ್ರಮುಖ ಆದ್ಯತೆ
- ಆತ್ಮನಿರ್ಭರ ಭಾರತದ ಅಡಿಯಲ್ಲಿ
- ತಂತ್ರಜ್ಞಾನ ಬಳಸಿ, ರಾಷ್ಟ್ರೀಯ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು
- ಭಾರತ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಶಕ್ತವಾಗಿದೆ
- ಮಧ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹೆಚ್ಚಿನ ಒತ್ತು
- ಕೋವಿಡ್ ಸಂತ್ರಸ್ತರಿಗೆ ಸಕಲ ನೆರವು ನೀಡುವ ಭರವಸೆ
- ಆತ್ಮ ನಿರ್ಭರ ಭಾರತಕ್ಕೆ ಒತ್ತು ನೀಡಿ, 50 ಲಕ್ಷ ಉದ್ಯೋಗ ಸೃಷ್ಟಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post