ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಬುಂದೇಲ್‌ಖಂಡ್ |
ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ PM Narendra Modi ನೇತೃತ್ವದ ಸರ್ಕಾರ ಇಂದು ಇಂತಹ ಸಾಲಿನ ಒಂದು ಮಹತ್ವದ ಕೊಡುಗೆಯನ್ನು ಲೋಕಾರ್ಪಣೆಗೊಳಿಸಿದೆ.
Bundelkhand will receive a gift of development from PM @narendramodi on July 16. Prime Minister will inaugurate the #BundelkhandExpressway.
A foundation stone was laid for the expressway by PM Modi himself in February 2020.@PMOIndia pic.twitter.com/Hy8MHo3b1Y
— DD News (@DDNewslive) July 15, 2022
ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ.
2020ರ ಫೆಬ್ರವರಿಯಲ್ಲಿ ಇದರ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದ ಪ್ರಧಾನಿಯವರು ಇಂದು ತಾವೇ ಲೋಕಾರ್ಪಣೆ ಮಾಡಿದ್ದಾರೆ. 296 ಕಿಮೀ ಉದ್ದದ ಈ ಎಕ್ಸ್’ಪ್ರೆಸ್ ಹೆದ್ದಾರಿ ಕಾಮಗಾರಿ ಕೇವಲ 28 ತಿಂಗಳಲ್ಲಿ ಮುಕ್ತಾಯಗೊಂಡಿದೆ.
Also read: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಿಂದ ಎಷ್ಟೆಲ್ಲಾ, ಏನೆಲ್ಲಾ ಹಾನಿಯಾಗಿದೆ? ಇಲ್ಲಿದೆ ಡಿಸಿ ನೀಡಿದ ಮಾಹಿತಿ
ಹೇಗಿದೆ ಗೊತ್ತಾ ಈ ಹೈವೇ?
296 ಕಿಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್’ಪ್ರೆಸ್, Bunelkand express ಒಟ್ಟು 19 ಮೇಲ್ಸೇತುವೆ, 224 ಕೆಳಸೇತುವೆ, 14 ಪ್ರಮುಖ ಸೇತುವೆ, 286 ಸಣ್ಣ ಸೇತುವೆ ಹಾಗೂ 4 ರೈಲ್ವೆ ಮೇಲ್ಸೇತುವೆಗಳನ್ನು ಹೊಂದಿದೆ. ಈ ನಿರ್ಮಾಣಗಳು ಸುಲಭದ ಪ್ರಯಾಣಕ್ಕೆ ಸಹಕಾರಿಯಾಗಿದೆ.
ಈ ಎಕ್ಸ್’ಪ್ರೆಸ್ ಉತ್ತರ ಪ್ರದೇಶದ ಚಿತ್ರಕೂಟ, ಬಂದಾ, ಮಹೋಬಾ, ಹಮೀರಪುರ, ಜಲೌನ್, ಔರೈಯಾ ಮತ್ತು ಇಟಾವಾ ಮುಂತಾದ ಜಿ¯್ಲೆಗಳ ಮೂಲಕ ಹಾದುಹೋಗುತ್ತದೆ.
ಚಿತ್ರಕೂಟ-ನವದೆಹಲಿ ಸಂಚಾರ ಸಮಯ ಕಡಿತ
ಈ ಎಕ್ಸ್’ಪ್ರೆಸ್ ಹೈವೇ ನಿರ್ಮಾಣದೊಂದಿಗೆ ಈಗ ಚಿತ್ರಕೂಟದಿಂದ ದೆಹಲಿಯವರೆಗಿನ ದೂರ ಕೇವಲ 6 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ. ಅದೇ ಸಮಯದಲ್ಲಿ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣದಿಂದ, ಕೈಗಾರಿಕೆಗಳ ಸ್ಥಾಪನೆಯೊಂದಿಗೆ ತಮ್ಮ ಪ್ರದೇಶದಲ್ಲಿ ಮಂಡಿಗಳ ಸಂಖ್ಯೆಯು ಹೆಚ್ಚಾಗುತ್ತದೆ, ಇದರಿಂದ ಬೆಳೆಯನ್ನು ದೆಹಲಿ ಅಥವಾ ದೊಡ್ಡ ಮಂಡಿಗಳಿಗೆ ಕಡಿಮೆ ಸಮಯದಲ್ಲಿ ಸಾಗಿಸಬಹುದಾಗಿದೆ.
ಈ ಹೆದ್ದಾರಿಯಿಂದಾಗಿ ಇಲ್ಲಿನ ಜನರಿಗಾಗಿ ಉದ್ಯೋಗದ ಅವಕಾಶಗಳನ್ನು ಸೃಷ್ಠಿಸುವ ಜೊತೆಯಲ್ಲಿ ಈ ಪ್ರದೇಶದ ಕೈಗಾರಿಕಾ ಅಭಿವೃದ್ಧಿಯಾಗಲಿದೆ. ಹೆದ್ದಾರಿ ಹಾದುಹೋಗುವ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಹಾಗೂ ವ್ಯಾಪಾರಾಭಿವೃದ್ದಿ ವಿಫುಲು ಅವಕಾಶಗಳನ್ನು ತೆರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post