ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ಼ ಕನ್ನಡ ವಾಹಿನಿಯ ಸಂಬಂಧಗಳನ್ನು ಸಂಭ್ರಮಿಸುವ ಅತೀದೊಡ್ಡ ಹಬ್ಬ ‘ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025’ ಕ್ಷಣಗಣನೆ ಶುರುವಾಗಿದೆ.
ಕೋಟಿ ಕಣ್ಣುಗಳು ಕಾತುರತೆಯಿಂದ ಕಾಯುತ್ತಿದ್ದ ಎಂಟರ್ಟೈನ್ಮೆಂಟ್ ನ ಮಹಾಪರ್ವ ಇದೇ ತಿಂಗಳ 17, 18 ಮತ್ತು 19 ರಂದು ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ಸಂಜೆ 6:30 ರಿಂದ ಪ್ರಸಾರ ಆಗಲಿದೆ. ಇನ್ನು ಈ ಕಾರ್ಯಕ್ರಮವನ್ನು ಕರ್ನಾಟಕದ ಹೆಸರಾಂತ ನಿರೂಪಕ ಅಕುಲ್ ಬಾಲಾಜಿ ಮತ್ತು ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿದ್ದಾರೆ.
ಈ ವರುಷದ ‘ಜೀ಼ ಕನ್ನಡ ಕುಟುಂಬ ಅವಾರ್ಡ್ಸ್’ನಲ್ಲಿ ಫೇವರಿಟ್ ನಟ, ಫೇವರಿಟ್ ನಟಿ, ಫೇವರಿಟ್ ಜೋಡಿ, ಫೇವರಿಟ್ ಸೀರಿಯಲ್, ಫೇವರಿಟ್ ರಿಯಾಲಿಟಿ ಶೋ ಮತ್ತು ಫೇವರಿಟ್ ನಿರೂಪಕ/ನಿರೂಪಕಿ ಅನ್ನುವ ಪ್ರಮುಖ 6 ಕೆಟಗರಿಗಳಿರಲಿವೆ. ಈ ಆರು ಪ್ರಮುಖ ವಿಭಾಗಗಳ ಜೊತೆಗೆ ಇನ್ನೂ ಅನೇಕ ವಿಭಾಗಗಳಲ್ಲಿ ವಿಜೇತರ ಘೋಷಣೆಯೂ ಇರಲಿದೆ.

ಜೀ಼ ಕನ್ನಡ ಅವಾರ್ಡ್ 2025 ರಲ್ಲಿ ಚಂದನವನದ ಡಿವೈನ್ ಸ್ಟಾರ್ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್ ಮತ್ತು ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತರಿದ್ದದ್ದು ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಜೀ಼ ಕನ್ನಡ ಅವಾರ್ಡ್ ನಲ್ಲಿ ವಿಶೇಷವಾಗಿ “ವೀಕೆಂಡ್ ವಿತ್ ರಮೇಶ್ ಮಿನಿಯೇಚರ್” ಕೂಡ ಇರಲಿದ್ದು, ರಿಷಬ್ ಶೆಟ್ಟಿ ಮತ್ತು ಹಿರಿಯ ನಟ ರಮೇಶ್ ಅವರ ಮಾತುಕತೆ ಈ ಕಾರ್ಯಕ್ರಮದ ಮತ್ತೊಂದು ಹೈಲೈಟ್ ಆಗಿತ್ತು.
ಇನ್ನು ನಮ್ಮ ವೀಕ್ಷಕರು ಈ ಎಲ್ಲಾ ಕಾರ್ಯಕ್ರಮಗಳನ್ನು ಮನಸಾರೆ ಮೆಚ್ಚಿದ್ದು ನಮ್ಮ ಹುರುಪನ್ನು ಮತ್ತಷ್ಟು ಹೆಚ್ಚಿಸಿದೆ. ಟೆಲಿವಿಷನ್ ಜೊತೆಗೆ OTT ಪ್ಲಾಟ್‌ಫಾರ್ಮ್ ಕನ್ನಡ ZEE5 “ನಮ್ಮ ಭಾಷೆ, ನಮ್ಮ ಕಥೆಗಳು” ಮೂಲಕ ಕನ್ನಡದ ಕಥೆಗಳಿಗೆ ಜೀವ ತುಂಬುವ ಕೆಲಸವನ್ನು ಮುಂದುವರೆಸಿದೆ. ಮತ್ತೊಂದೆಡೆ ಮೈಕ್ರೋ-ಸರಣಿ ಅಪ್ಲಿಕೇಶನ್ ಬುಲೆಟ್ ಇಂದಿನ ಪೀಳಿಗೆಗಳಿಗೆ ಕಥೆ ಹೇಳುವ ಕಲೆಗೆ ಹೊಸ ಅರ್ಥ ನೀಡುತ್ತಿದೆ. ಇನ್ನು ನಮಗೆ ವೀಕ್ಷಕರು ನೀಡುವ ಸಪೋರ್ಟ್ ಮತ್ತು ಪ್ರೀತಿ ಅಭೂತಪೂರ್ಣ” ಎಂದರು.
ಜನಮೆಚ್ಚಿದ ತಾರೆಗಳಿಗೆ ಪ್ರಶಸ್ತಿಯ ಗೌರವ ಇದೇ 17, 18 ಮತ್ತು 19 ರಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ನೋಡಲು ಮರೆಯದಿರಿ!
ಇನ್ನು ಈ ಕಾರ್ಯಕ್ರಮವನ್ನು ಕರ್ನಾಟಕದ ಹೆಸರಾಂತ ನಿರೂಪಕರಾದ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮತ್ತು ನಿರೂಪಕಿ ಅನುಶ್ರೀ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅಷ್ಟೇ ಅಲ್ಲದೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ನವರಸ ನಾಯಕ ಜಗ್ಗೇಶ್, ಶ್ರೀನಾಥ್, ಸುಧಾರಾಣಿ, ಪ್ರೇಮ, ನಾಗಾಭರಣ, ಯೋಗರಾಜ್ ಭಟ, ಡಾಲಿ ಧನಂಜಯ್, ರಚಿತಾ ರಾಮ್, ವಿಜಯ ರಾಘವೇಂದ್ರ, ಅದಿತಿ ಪ್ರಭುದೇವ, ಪೃಥ್ವಿ ಅಂಬರ್, ಮಾನ್ವಿತ ಹರೀಶ್, ಅಮೂಲ್ಯ, ರಿಷಿ, ಡಾರ್ಲಿಂಗ್ ಕೃಷ್ಣ, ಪ್ರಜ್ವಲ್ ದೇವರಾಜ್, ಸಪ್ತಮಿ ಗೌಡ , ಪ್ರಮೋದ್ ಶೆಟ್ಟಿ, ವಿಕ್ರಂ ರವಿಚಂದ್ರನ್ ಮತ್ತು ಅನೇಕ ಸ್ಯಾಂಡಲವುಡ್ ಕಲಾವಿದರು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಅಷ್ಟೇ ಅಲ್ಲದೆ ಹಾಡಿನ ಮೂಲಕ ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಮಾಡಿರೋ ನಿರೂಪಣೆ ಎಲ್ಲರ ಗಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post