ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಾಣಿಜ್ಯ ಬಳಕೆ ಅಡುಗೆ ಅನಿಲ Commercial use cooking gas ಬೆಲೆಯನ್ನು ಇಳಿಕೆ ಮಾಡಲಾಗಿದ್ದು, ಇನ್ನು ಮುಂದೆ 135ರೂ.ನಷ್ಟು ಅಗ್ಗವಾಗಲಿದೆ. ಪ್ರಸ್ತುತ ದರ ಬದಲಾವಣೆಯು ಜೂನ್ 1ರಿಂದಲೇ ಜಾರಿಗೆ ಬರಲಿದೆ.
ಈ ಕುರಿತು ಖಾಸಗಿ ಸುದ್ಧಿ ಸಂಸ್ಥೆಯೊಂದು ವರದಿ ಮಾಡಿದ್ದು, ವಾಣಿಜ್ಯ ಸಿಲಿಂಡರ್ ಸಿಲಿಂಡರ್ (19 ಕೆಜಿ) ಜೂನ್ 1 ರಿಂದ 135 ರೂ. ನಷ್ಟು ಅಗ್ಗವಾಗಲಿದೆ ಎನ್ನಲಾಗಿದೆ.
ವಾಣಿಜ್ಯ ಅಡುಗೆ ಅನಿಲದ ಬೆಲೆ ಇಳಿಕೆಯೊಂದಿಗೆ 19 ಕೆಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 2219ರೂ. ಮತ್ತು ಮುಂಬೈನಲ್ಲಿ 2171.50ರೂ. ಆಗಲಿದೆ.
ಅದೇ ರೀತಿಯಾಗಿ, ಇತರ ಮೆಟ್ರೋಪಾಲಿಟನ್ ನಗರಗಳಲ್ಲಿ ಅದೇ ಬೆಲೆಯು ಬದಲಾವಣೆ ಕಾಣಲಿದ್ದು, ಕೋಲ್ಕತ್ತಾದಲ್ಲಿ 2322ರೂ. ಮತ್ತು ಚೆನ್ನೈನಲ್ಲಿ 2373ರೂ. ಆಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post