ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಾಣಿಜ್ಯ ಅಡುಗೆ ಅನಿಲ ಬಳಕೆ ಅಡುಗೆ ಅನಿಲ ಬೆಲೆಯಲ್ಲಿ ಕೊಂಚ ಇಳಿಯಾಗಿದ್ದು, ಪರಿಷ್ಕೃತ ದರ ನಿನ್ನೆ ಮಧ್ಯ ರಾತ್ರಿಯಿಂದಲೇ ಜಾರಿಯಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಕೊಂಚ ಇಳಿಕೆಯಾದ ಪರಿಣಾಮ 19ಕೆಜಿ ವಾಣಿಜ್ಯ ಸಿಲಿಂಡರ್ ದರ ಕಡಿಮೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಇದರ ಬೆಲೆ 1,885 ರಿಂದ 1859.50ಕ್ಕೆ ಇಳಿದಿದ್ದು, 25.50 ರೂಪಾಯಿ ಕಡಿಮೆಯಾಗಿದೆ.
ಕೋಲ್ಕತ್ತಾದಲ್ಲಿ 1,995.50 ರೂ.ನಿಂದ 1959.00 ರೂಪಾಯಿಗೆ ಇಳಿದಿದ್ದು 36.5 ರೂಪಾಯಿ ಕಡಿಮೆಯಾಗಿದೆ. ಅದೇ ರೀತಿ ಮುಂಬೈನಲ್ಲಿ 1,844 ರೂ. 1811.50ರೂಪಾಯಿಗೆ ಇಳಿದಿದೆ. ಚೆನ್ನೈನಲ್ಲಿ 2,045 ರೂಪಾಯಿಯಿಮದ 2009 ರೂಪಾಯಿಗೆ ಇಳಿಕೆಯಾಗಿದೆ. ಸತತ ಆರನೇ ಬಾರಿಗೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ.
Also read: ಪೆರಿಷಬಲ್ ಸರಕು ಸಾಗಣೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಮ್ಮೆ ಮೊದಲ ಸ್ಥಾನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post