ಕಲ್ಪ ಮೀಡಿಯಾ ಹೌಸ್ | ನವದೆಹಲಿ |
2021-22ರ ಆರ್ಥಿಕ ವರ್ಷದ ಐಟಿ ರಿಟನ್ಸ್ (IT Returns) ಸಲ್ಲಿಕೆಗೆ ನಿನ್ನೆ ರಾತ್ರಿ 12 ಗಂಟೆಗೆ ಅವಧಿ ಮುಕ್ತಾಯವಾಗಿದ್ದು, ಬಹಳಷ್ಟು ಮಂದಿ ತಡರಾತ್ರಿಯವರೆಗೂ ಪ್ರಯತ್ನಿಸಿ ಸಲ್ಲಿಸಿದ್ದಾರೆ.
ಜುಲೈ 31ರ ನಿನ್ನೆ ರಾತ್ರಿ 12 ಗಂಟೆಯವರೆಗೂ ಕೇಂದ್ರ ಸರ್ಕಾರ ಗಡುವು ನೀಡಿದ್ದು, ಕೊನೆಯ ಗಳಿಗೆಯವರೆಗೂ ರಿಟರ್ನ್ಸ್ ಸಲ್ಲಿಕೆಯಾಗಿದೆ. ಒಟ್ಟಾರೆಯಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿನ್ನೆ ಸಂಜೆಯವರೆಗೂ ಸುಮಾರು 5.8 ಕೋಟಿಯಷ್ಟು ಆದಾಯ ತೆರಿಗೆ ರಿಟನ್ಸ್’ಗಳು ಸಲ್ಲಿಕೆಯಾಗಿವೆ ಎಂದು ವರದಿಯಾಗಿದೆ.
ಆದಾಯ ತೆರಿಗೆ ಇಲಾಖೆಯ ಟ್ವಿಟರ್ ಮಾಹಿತಿಯಂತೆ,
ಆದಾಯ ತೆರಿಗೆ ಇಲಾಖೆಯು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಇದನ್ನು ಪ್ರಕಟಿಸಿತ್ತು. ತೆರಿಗೆದಾರರಲ್ಲಿ ಬಹುಪಾಲು ವ್ಯಕ್ತಿಗಳು ಮತ್ತು ವೇತನ ಪಡೆಯುವ ವರ್ಗದವರು ತಮ್ಮ ರಿಟನ್ಸ್ ಅನ್ನು ಜುಲೈ 31ರ ಅಂತಿಮ ದಿನಾಂಕದೊಳಗೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅಲ್ಲದೇ, ರಿಟರ್ನ್ಸ್ ಸಲ್ಲಿಸದವರ ಮೊಬೈಲ್ ಸಂಖ್ಯೆ ಹಾಗೂ ಇ ಮೇಲ್’ಗೆ ಪ್ರತಿನಿತ್ಯವೂ ಮೆಸೇಜ್ ಕಳುಹಿಸುವ ಮೂಲಕ ಎಚ್ಚರಿಸಲಾಗುತ್ತಿತ್ತು.
ಆದಾಗ್ಯೂ ನಿನ್ನೆ ರಾತ್ರಿಯ ಒಳಗಾಗಿ ರಿಟರ್ನ್ಸ್ ಸಲ್ಲಿಸುವಲ್ಲಿ ವಿಫಲರಾದವರು ಇಂದಿನಿAದ ಡಿಸೆಂಬರ್ 31ರ ಒಳಗಾಗಿ ದಂಡ ಸಹಿತವಾಗಿ ಐಟಿ ರಿಟರ್ನ್ಸ್ ಫೈಲ್ ಮಾಡಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post