ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಶಿಹಾನ್ ಶಿವಮೊಗ್ಗ ವಿನೋದ್ ಅವರು ಶಿಕಾರಿಪುರ ತಾಲೂಕು ಕರಾಟೆ ಸಂಸ್ಥೆಯ ಅಧ್ಯಕ್ಷರಾಗಿ ಎಸ್. ಎನ್. ನರಸಿಂಹಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕಾರಿಪುರ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಮಾತನಾಡಿ, ಎಸ್ ಎನ್ ನರಸಿಂಹಸ್ವಾಮಿ ರವರು ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಯನ್ನು ಶಿಕಾರಿಪುರದಲ್ಲಿ ಪ್ರತಿನಿಧಿಸುವುದರ ಜೊತೆಗೆ ಶಿಕಾರಿಪುರದಲ್ಲಿ ಕರಾಟೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೆಲಸ ಮಾಡುವರು ಎಂದು ಹೇಳಿದರು.
Also read: ವಿವಿಯಲ್ಲಿನ ಸಸ್ಯ ಸಂಪನ್ಮೂಲಗಳನ್ನು ಸಂಶೋಧಿಸಿ: ಡಾ. ನಾಗೇಗೌಡ










Discussion about this post