ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಇಲ್ಲಿನ ಕಡೇನಂದಿಹಳ್ಳಿಯಲ್ಲಿ ನಿನ್ನೆ ಜಮೀನು ಉಳುಮೆ ಮಾಡಿ ಮನೆಗೆ ಬರುವಾಗ ನಡಲುಕಟ್ಟೆ ಕೆರೆ ಕೋಡಿಯಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ರಾಜು ಕಿಟದಹಳ್ಳಿ (20), ಶೇಖರಪ್ಪ ಕಾನಕೇರಿ (60) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ:
ಜಮೀನಿನಲ್ಲಿ ರೂಟರ್ ಉಳುಮೆ ಮುಗಿಸಿ ಮನೆಗೆ ಮರಳುವಾಗ ಕೆರೆ ಕೋಡಿಯ ಏರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ತಗ್ಗಿನ ಜಾಗಕ್ಕೆ ಉರುಳಿಬಿದ್ದಿದೆ. ಸವಾರನ ಸಮೇತ ಇಂಜಿನ್ ಮೇಲೆ ಕುಳಿತವ ಟ್ರಾಕ್ಟರ್ ಕೆಳಗೆ ಸಿಲುಕಿಕೊಂಡಿದ್ದಾರೆ. ಜೋರು ಶಬ್ದ ಕೇಳಿ ಅಕ್ಕಪಕ್ಕದ ಜಮೀನಿನಲ್ಲಿನ ರೈತರು ಬರುವಷ್ಟರಲ್ಲಿ ಇಬ್ಬರು ಪ್ರಜ್ಞೆ ತಪ್ಪಿದ್ದರು. ಗ್ರಾಮದಿಂದ ಮತ್ತೊಂದು ಟ್ರಾಕ್ಟರ್ ಇಂಜಿನ್ ತಂದು ಉರುಳಿಬಿದ್ದ ಟ್ರಾಕ್ಟರ್’ನಡಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.
ಹಿರೇಕೆರೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲೇ ಇಬ್ಬರು ಮೃತಪಟ್ಟಿದ್ದರು. ಸ್ಥಳಕ್ಕೆ ಶಿರಾಳಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post