ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಗತ್ತಿನ ಅತಿ ಎತ್ತರದ ಪ್ರದೇಶವಾಗಿರುವ ಭಾರತದ ಖರದುಂಗ್ಲಾ (17982 ಅಡಿ)ದಲ್ಲಿ ಪುನೀತ್ ರಾಜ್ಕುಮಾರ್ ಫೋಟೋ ಹಾಗೂ ಕನ್ನಡದ ಧ್ವಜವನ್ನು ಹಾರಿಸುವ ಮೂಲಕ ಶಿವಮೊಗ್ಗದ ಯುವಕರು ಗಮನ ಸೆಳೆದಿದ್ದಾರೆ.
ಪ್ರವಾಸ ಸಂದರ್ಭದಲ್ಲಿ ಈ ಕುರಿತು ಮಾತನಾಡಿರುವ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ರೆ, ಅಪ್ಪು ಕೇವಲ ಕರ್ನಾಟಕದ ಜನರ ಪ್ರೀತಿಯನ್ನು ಮಾತ್ರವಲ್ಲದೇ ಜಗತ್ತಿನ ಎಲ್ಲಾ ದೇಶಗಳ ಜನರ ಪ್ರೀತಿ ಗಳಿಸಿದ್ದರು. ಅವರ ನೆನಪು ಇಂದಿಗೂ ದೂರವಾಗುತ್ತಿಲ್ಲ. ಹಾಗಾಗಿಯೇ ನೆಚ್ಚಿನ ನಾಯಕನ ಚಿತ್ರವನ್ನು ಹಾಗೂ ಕನ್ನಡ ಧ್ವಜವನ್ನು ಅತ್ಯಂತ ಎತ್ತರದ ಪ್ರದೇಶದಲ್ಲಿ ಹಾರಿಸಬೇಕು ಎಂದು ಸ್ನೇಹಿತರೆಲ್ಲರೂ ಸೇರಿ ಈ ಪ್ರವಾಸ ಕೈಗೊಂಡಿದ್ದೇವೆ ಎಂದರು.
ಈ ಲಡಾಕ್ ಪ್ರವಾಸದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಮೋದ್, ಗೌತಮ್, ಹರೀಶ್, ಕಿರಣ್ ಅವರು ಪಾಲ್ಗೊಂಡಿದ್ದು, ತಮ್ಮ ನೆಚ್ಚಿನ ನಾಯಕನ ಭಾವಚಿತ್ರ ಹಾಗೂ ಕನ್ನಡ ದ್ವಜವನ್ನು ಎತ್ತಿ ಹಿಡಿದಿದ್ದಾರೆ.
Also read: ದೇಶಾದ್ಯಂತ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಪ್ರಧಾನಿಗಳ ಹುಟ್ಟುಹಬ್ಬ ಆಚರಣೆ: ಕೆ. ಗೋಪಾಲಯ್ಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post