ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಬಿ.ಹೆಚ್. ರಸ್ತೆಯಲ್ಲಿರುವ ಗಾಯಿತ್ರಿಮಾಂಗಲ್ಯ ಮಂದಿರದಲ್ಲಿ ಆ. 27ರಂದು ಸಂಜೆ 4:30ಕ್ಕೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಆಯೋಜಿಸಲಾಗಿದ್ದು, ಇದೇ ಸಂದರ್ಭದಲ್ಲಿ ಜಿಲ್ಲೆಯ ಐದು ಜನ ಮಹನೀಯರಿಗೆ ವಿಪ್ರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ನಟರಾಜ್ ಭಾಗವತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಶಿವಮೊಗ್ಗ ಜಿಲ್ಲೆಯ ಬ್ರಾಹ್ಮಣ ಸಂಘಟನೆಗಳಿಂದ ಜಿಲ್ಲೆಯ ಸಾಧಕರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದ್ದು, ಸಮಾಜದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಭ.ಮ. ಶ್ರೀಕಂಠ, ಅ. ಸುಂದರ್, ಆ.ಪಾ. ರಾಮಭಟ್ಟರು, ರೇಖಿ ಚಿಕಿತಸಾ ತಜ್ಞ ಡಾ. ಸುರೇಶ್, ಸೌಂದರ್ಯ ಲಹರಿಯ ರಾಜಲಕ್ಷ್ಮೀಯವರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 3800 ಸದಸ್ಯರಿದ್ದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಆರೋಗ್ಯ, ಶಿಕ್ಷಣ ಸೇವಾ ವಿಭಾಗ, ಮಾಸಾಶನ ಸೇವಾ ಸಮಿತಿ, ಸಾಂಸ್ಕೃತಿಕ ಚಟುವಟಿಕೆ ಸಮಿತಿ, ವಿಪ್ರ ನುಡಿ ಸಮಿತಿ ಸೇರಿದಂತೆ 18 ವಿಭಾಗದ ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
Also read: ಸೆ.5ರಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ ಅವರ 2ನೇ ವರ್ಷದ ಪುಣ್ಯಸ್ಮರಣೆ
ಹೊಸ ಸಮಿತಿ ರಚಿಸಲಾಗಿದ್ದು, ನಿರಂತರ ಸಮಾಜದ ಕೆಲಸ ಮಾಡಲಾಗುತ್ತಿದೆ. 42ಸಾವಿರ ಸದಸ್ಯರಿದ್ದ ರಾಜ್ಯ ಮಹಾ ಸಭಾ ಪ್ರಸ್ತುತ 52ಸಾವಿರ ಸದಸ್ಯರನ್ನು ಹೊಂದಿದ್ದೇವೆ. ಮೂರು ತಿಂಗಳ ಹಿಂದೆ ಶಿರಸಿಯಲ್ಲಿ ಮಹಾಸಭಾದ ರಾಜ್ಯ ಸಭೆ ನಡೆದಿತ್ತು. ಈ ಬಾರಿ ಶಿವಮೊಗ್ಗದಲ್ಲಿ ನಡೆಯುತ್ತಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















