ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂತಹಾ ಭಾವವೈಕ್ಯತಾ ಶಿಬಿರಗಳಿಂದ ಸಮಾಜದಲ್ಲಿ ನೆಲೆಸಿರುವ ಬೇದ ಭಾವಗಳು ತೊಲಗಿ ನಾವೆಲ್ಲರೂ ಒಂದು ಎಂಬ ಭಾವನೆ ಮೂಡುತ್ತದೆ ಎಂದು ಜಿಲ್ಲೆಯ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಡಾ. ವಿಕ್ರಂ ಅಮಟೆ ತಿಳಿಸಿದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಬಾವೈಕ್ಯತಾ ಶಿಬಿರದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಪಿ.ವೀರಭದ್ರಪ್ಪ, ಕುಲಸಚಿವರಾದ ಜಿ. ಅನುರಾಧಾ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ, ಪ್ರಾಂಶುಪಾಲರಾದ ಪ್ರೊ. ವೀಣಾ, ಪ್ರೊ. ವಾಗ್ದೇವಿ ರಾಸೇಯೋ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಾಂಸ್ಕೃತಿಕ ಜಾಥವು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಿಂದ ಪ್ರಾರಂಭವಾಗಿ ಎಂ.ಆರ್.ಎಸ್. ವೃತ್ತದಿಂದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಆವರಣದ ಮೂಲಕ ಉಧ್ಘಾಟನಾ ಸಭಾಂಗಣಕ್ಕೆ ಬಂದು ಸೇರಿತು. ವಿವಿಧ ಸಂಸ್ಕೃತಿ, ರಂಗುರಂಗಿನ ಉಡುಗೆ ತೊಡುಗೆಗಳು ಸ್ವರ-ಸಂಗೀತ, ವಾದ್ಯಗೋಷ್ಠಿಯೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಸಂಪನ್ನಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post