ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಶವವನ್ನು ಅವರ ಕುಟುಂಬದ ಸಮ್ಮುಖದಲ್ಲೇ ಹೊರತೆಗೆಸಿ, ಪಂಚನಾಮೆ ಮಾಡಿ, ಶವವನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ಸಂತೋಷ್ ಪಾಟೀಲ್ ಬರೆದಿರುವುದು ಡೆತ್ ನೋಟ್ ಅಲ್ಲ. ಡೆತ್ ಮೆಸೆಜ್ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ Home Minister Araga Gnanendra ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೇಸ್ ನವರು ವಿರೋಧ ಮಾಡುವುದು ಮುಖ್ಯವಲ್ಲ. ಅವರು ವಿರೋಧ ಪಕ್ಷದಲ್ಲಿದ್ದಾರೆ. ಅವರ ಆರೋಪ ಸಹಜ. ಮುಳುಗೋರಿಗೆ ಮುಳ್ಳುಕಡ್ಡಿ ಆಧಾರ ಎಂಬಂತೆ ಕಾಂಗ್ರೇಸ್ ನವರಿಗೆ ಯಾವ ವಿಷಯ ಇರಲಿಲ್ಲ. ಈಗ ಸಂತೋಷ್ ಪಾಟೀಲ್ ವಿಷಯವನ್ನು ಇಟ್ಟುಕೊಂಡು ಸಾವಿನ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದರು.
ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲ್ ಬರೆದಿರುವುದು ಡೆತ್ ನೋಟ್ ಅಲ್ಲ. ಅದು ಡೆತ್ ಮೆಸೆಜ್. ಅದನ್ನು ಅವರೇ ಬರೆದರೋ ಅಥವಾ ಅವರ ಹೆಸರಿನಲ್ಲಿ ಬೇರೆಯವರು ಬರೆದು ಕಳಿಸಿದರೋ ಎಂದು ಎಲ್ಲಾ ಆಯಾಮಗಳಲ್ಲಿ ತನಿಖೆಯಾಗುತ್ತಿದೆ. ಉಡುಪಿ ಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ. ಖಂಡಿತವಾಗಿಯೂ ಸಧ್ಯದಲ್ಲಿಯೇ ಪೊಲೀಸ್ ತನಿಖೆಯಿಂದ ಸತ್ಯ ಹೊರಬರಲಿದೆ. ನಮ್ಮ ಸಚಿವರ ಮೇಲೆ ಗಂಭೀರವಾದ ಆರೋಪ ಇರುವುದರಿಂದ ಬಹಳ ಪಾರದರ್ಶಕವಾಗಿ ವಿವರವಾಗಿ ತನಿಖೆಯಾಗುತ್ತೆ ಎಂದರು.
Also read: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ತೀರ್ಮಾನ ಕೊಡಲು ವಿರೋಧ ಪಕ್ಷದವವರೇನು ನ್ಯಾಯಾಧೀಶರೇ: ಸಿಎಂ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post