ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೈಕ್ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಕೋಟೆ ಪೊಲೀಸರು ಬಂಧಿಸಿದ್ದು, ಆತನಿಂದ 1.77ಲಕ್ಷ ರೂ. ಮೌಲ್ಯದ ಐದು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಬಾಪೂಜಿ ನಗರದ ವಾಸಿಯೊಬ್ಬರು ಏ.8ರಂದು ಶಂಕರಮಠ ಸರ್ಕಲ್ ಹತ್ತಿರ ಬೈಕನ್ನು ನಿಲ್ಲಿಸಿ ಅಂಗಡಿಗೆ ತೆರಳಿ, ಹಿಂದಿರುಗಿ ಬಂದು ನೋಡಿದಾಗ ಅವರ ಬೈಕ್ ಕಳುವಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡ ಸಿಬ್ಬಂದಿಗಳು ಹೊಳೆಹೊನ್ನೂರು, ಕಲ್ಲಿಹಾಳ್ ಸರ್ಕಲ್ ಬಳಿ ಘಟನೆಗೆ ಸಂಬಂಧಪಟ್ಟ ಶಫೀವುಲ್ಲಾ (26) ಎಂಬಾತನ್ನು ಬಂಧಿಸಿದ್ದಾರೆ. ಆರೋಪಿಯು ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಬೈಕ್ ಕಳುವು ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಆತನಿಂದ ಐದು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
Also read: ಬಾಲಕಾರ್ಮಿಕರ ಪತ್ತೆಗೆ ನಿರಂತರ ತಪಾಸಣೆ ಅಗತ್ಯ : ಡಿಸಿ ಡಾ. ಸೆಲ್ವಮಣಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post