ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ ತಾಲೂಕಿನ ಜೋಗ ಸಮೀಪ ಬಸ್ ಹಾಗೂ ಮಾರುತಿ ಓಮ್ನಿ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆತರಲಾಗಿದೆ.
ಜೋಗ ವರ್ಕ್ ಮನ್ ಬ್ಲಾಕ್ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಮಾರುತಿ ಓಮ್ನಿ ನಡುವೆ ಅಪಘಾತ ಸಂಭವಿಸಿದೆ. ಬಳೆ ಪದ್ಮಾವತಿ ದೇವಸ್ಥಾನದ ಅರ್ಚಕನಾಗಿದ್ದ ದೇವ ಪೂಚಾರಿ(60) ಮೃತಪಟ್ಟವರು.
Also read:
ಬಳೆ ಪದ್ಮಾವತಿ ದೇವಾಲಯದ ಧರ್ಮದರ್ಶಿ ವೀರಾ ರಾಜೇಂದ್ರ ಜೈನ್(70) ಗಂಭೀರ ಗಾಯಗೊಂಡವರು. ಚಿಕ್ಕಮಗಳೂರಿನಿಂದ ಕಾರವಾರ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್, ಜೋಗದಿಂದ ಬಳೆ ಪದ್ಮಾವತಿಗೆ ತೆರಳುತ್ತಿದ್ದ ಓಮ್ನಿ ನಡುವೆ ಅಪಘಾತ ಸಂಭವಿಸಿದೆ. ಸರಿಯಾದ ಸಮಯಕ್ಕೆಬಾರದ ಅಂಬುಲೆನ್ಸ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post