ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾನಗರದಲ್ಲಿರುವ ಸಹ್ಯಾದ್ರಿ ಕಾಲೇಜು ಮಹಿಳಾ ವಸತಿ ನಿಲಯದಲ್ಲಿ Sahyadri College Women’s Hostel ಆಹಾರ ವ್ಯತ್ಯಾಸದಿಂದಾಗಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿನ್ನೆ ರಾತ್ರಿ 10ರ ಸುಮಾರಿಗೆ ನಡೆದಿದೆ.
ಊಟದ ನಂತರ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇವರಲ್ಲಿ ಕೆಲವರು ಗುಣಮುಖರಾಗಿ ಹಾಸ್ಟಲ್‌ಗೆ ಹಿಂತಿರುಗಿದ್ದಾರೆ. ಸುಮಾರು 12ಕ್ಕೂ ಅಧಿಕ ವಿದ್ಯಾರ್ಥಿನಿಯರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇನ್ನುಳಿದವರು ಚೇತರಿಸಿಕೊಂಡಿದ್ದಾರೆ.
Also read: ಪಂಚರಾಜ್ಯ ಚುನಾವಣೆ: ಮೂರು ರಾಜ್ಯದಲ್ಲಿ ಹೇಳ ಹೆಸರಿಲ್ಲದಂತಾದ ಶಿವಸೇನೆ! ಗಳಿಸಿದ ಮತಗಳ ಸಂಖ್ಯೆ ಗೊತ್ತಾ?
ಆಸ್ಪತ್ರೆಗೆ ಕೆ.ಈ. ಕಾಂತೇಶ್ ಭೇಟಿ:
ಘಟನೆ ತಿಳಿದಾಕ್ಷಣ ಆಸ್ಪತ್ರೆಗೆ ದೌಡಾಯಿಸಿದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಈ. ಕಾಂತೇಶ್, K. E. Kantesh ವಿದ್ಯಾರ್ಥಿನಿಯರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಘಟನೆಯ ವಿವರ ಪಡೆದು ಆರೋಗ್ಯದ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದರು. ಯಾವುದೇ ರೀತಿಯ ಸಹಾಯಕ್ಕೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post