ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀವಿಜಯದ ವತಿಯಿಂದ ಮಾರ್ಚ್ 19 ರ ಶನಿವಾರದಂದು ಕನ್ನಡದ ಮೇರು ಕವಿ ಡಾ. ಡಿ.ವಿ. ಗುಂಡಪ್ಪನವರ ಜನ್ಮದಿನ ಸಂಭ್ರಮಾಚರಣೆಯ ನೆನಪಿಗಾಗಿ ‘ಡಿ.ವಿ.ಜಿ ನೃತ್ಯ ನಮನ’ ಕಾರ್ಯಕ್ರಮ ನಡೆಯಲಿದೆ. ಡಾ. ಕೆ.ಎಸ್.ಪವಿತ್ರ ಅವರು ಡಿ.ವಿ.ಜಿ ಅವರ ಸಮಗ್ರ ಕಾವ್ಯಾಧಾರಿತ ನೃತ್ಯವನ್ನು ಪ್ರಸ್ತುತ ಪಡಿಸಲಿದ್ದಾರೆ.
ಕಾರ್ಯಕ್ರಮವು ನೇರ ಹಿನ್ನೆಲೆ ಸಂಗೀತವನ್ನೊಳಗೊಂಡಿರುತ್ತದೆ. ಮುಖ್ಯ ಅತಿಥಿಗಳಾಗಿ ಡಿ.ವಿ.ಜಿ ಅವರ ಮೊಮ್ಮಗ, ನಿವೃತ್ತ ಪ್ರಾಧ್ಯಾಪಕ ಮತ್ತು ಇಂಜಿನಿಯರ್ ಪ್ರೊ. ಕೆ. ನಟರಾಜನ್, ಹಾಗೂ ಖ್ಯಾತ ವಿದ್ವಾಂಸರಾದ ವಿ. ಜಿ.ಎಸ್ ನಟೇಶ್‌ರವರು ಪಾಲ್ಗೊಳ್ಳಲಿದ್ದಾರೆ.
Also read: ಪ್ರಧಾನಿ ಮೋದಿ ಗ್ರಾಮ ಭೇಟಿ ಹಿನ್ನೆಲೆ ಸಂಸದ ಬಿವೈಆರ್, ಸಚಿವ ಈಶ್ವರಪ್ಪರಿಂದ ಸ್ಥಳ ಪರಿಶೀಲನೆ
ಶ್ರೀವಿಜಯದ ಅಧ್ಯಕ್ಷರಾದ ಡಾ. ಕೆ.ಆರ್.ಶ್ರೀಧರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸಾಂಸ್ಕೃತಿಕ ನಿರ್ದೇಶನಾಲಯದ ಸಹಕಾರವಿದೆ. ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಶ್ರೀವಿಜಯ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post