ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೆ ಇಲಾಖೆಯು ಶಿವಮೊಗ್ಗಕ್ಕೆ ಮತ್ತೊಂದು ರೈಲಿನ ಕೊಡುಗೆ ನೀಡಿದೆ. ತಾಳಗುಪ್ಪ- ಮೈಸೂರು- ತಾಳಗುಪ್ಪ Mysore-Thalaguppa passenger train ನಡುವೆ ಒಂದು ಜತೆ ರೈಲುಗಳು ಜು.24ರಿಂದ ಸಂಚಾರ ಆರಂಭಿಸಲಿವೆ.
ಮೈಸೂರಿನಿಂದ ಮಧ್ಯಾಹ್ನ 2ಗಂಟೆಗೆ ಹೊರಡುವ ರೈಲು ಶಿವಮೊಗ್ಗಕ್ಕೆ ರಾತ್ರಿ 8.30ಕ್ಕೆ, ತಾಳಗುಪ್ಪವನ್ನು ರಾತ್ರಿ 11.30ಕ್ಕೆ ತಲುಪಲಿದೆ. ತಾಳಗುಪ್ಪದಿಂದ ಬೆಳಗ್ಗೆ 6.10ಕ್ಕೆ ಹೊರಟು, ಶಿವಮೊಗ್ಗಕ್ಕೆ ಬೆಳಗ್ಗೆ 8.15ಕ್ಕೆ, ಮೈಸೂರಿಗೆ ಮಧ್ಯಾಹ್ನ 3.35ಕ್ಕೆ ತಲುಪಲಿದೆ. ಈ ರೈಲುಗಳಲ್ಲಿ 10 ದ್ವಿತೀಯ ದರ್ಜೆ 10 ಬೋಗಿಗಳು, ಸರಕು ಸಾಗಣೆ ಮತ್ತು ಬ್ರೆಕ್ ಬೋಗಿಗಳು ಇರಲಿವೆ.
ತಾಳಗುಪ್ಪದಿಂದ ಹೊರಡುವ ರೈಲು:
ಈ ಹಿಂದೆ ತಾಳಗುಪ್ಪ ಚಾಮರಾಜನಗರದ ನಡುವೆ ಸಂಚರಿಸುತ್ತಿದ್ದ ರೈಲನ್ನು ಕೋವಿಡ್ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು. ಈಗ ಸಮಯ ಸ್ವಲ್ಪ ಬದಲಾವಣೆ ಮಾಡಿ ಪುನಾರಂಭಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post