ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಂಡ ಹೆಂಡತಿಯ ನಡುವಿನ ಜಗಳ ಹೆಂಡತಿಯ ಕೊಲೆ ಹಾಗೂ ಗಂಡನ ಆತ್ಮಹತ್ಯೆ ಯತ್ನದ ಮೂಲಕ ಅಂತ್ಯಗೊಂಡ ಘಟನೆ ಶಿವಮೊಗ್ಗ ನಗರದಲ್ಲಿ ವರದಿಯಾಗಿದೆ.
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಗರದ ಪ್ರಿಯಾಂಕ ಲೇ ಔಟ್ ನಲ್ಲಿನ ಮನೆಯೊಂದರಲ್ಲಿನ ಅಡುಗೆ ಮನೆಯ ರಕ್ತದ ಮಡುವಿನಲ್ಲಿ ಪತ್ನಿ ಪತ್ತೆಯಾಗಿದ್ದಾಳೆ. ಮೃತ ಮಹಿಳೆಯನ್ನು ಮಂಜುಳ (30) ಎಂದು ಗುರುತಿಸಲಾಗಿದೆ.
ಪತಿ ದಿನೇಶ್ ಮೆಸ್ಕಾಂ ಉದ್ಯೋಗಿ ಎನ್ನಲಾಗಿದ್ದು, ಆತ ಸಹ ಕೈ ಕೊಯ್ದುಕೊಂಡಿದ್ದಾನೆ. ಆತನನ್ನು ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ.
ನಿನ್ನೆ ತುಂಗನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪ್ರಿಯಾಂಕ ಲೇಔಟ್ ನಲ್ಲಿ ದಿನೇಶ್ ಮತ್ತು ಮಂಜುಳಾರ ನಡುವೆ ಗಲಾಟೆಯಾಗಿದ್ದು ಈ ಗಲಾಟೆಯೇ ಕೊಲೆಗೆ ಕಾರಣವಾಗಿದೆಯ ಎಂದು ಪತಿ ದಿನೇಶ್ ಪೊಲೀಸರ ಬಳಿ ಹೇಳಿದ್ದಾನೆ ಎನ್ನಲಾಗಿದೆ.
ಕೊಲೆಗೆ ಕಾರಣವೇನು ಎಂಬುದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಯಬೇಕಿದೆ. ಇನ್ನೂ ತನಿಖೆಯಿಂದ ತಿಳಿದು ಬರಬೇಕಿದೆ. ಮಂಜುಳ 12 ವರ್ಷಗಳವರೆಗೆ ದಿನೇಶ್’ನೊಂದಿಗೆ ಸಂಸಾರ ನಡೆಸಿದ್ದಾರೆ. ಮತ್ತಿಘಟ್ಟ ಮೂಲದ ಮಂಜುಳಾ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ.
ಸ್ಥಳಕ್ಕೆ ತುಂಗ ನಗರ ಪೊಲೀಸರು ಭೇಟಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post