ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂತಹದೊಂದು ಅಗ್ನಿಪರೀಕ್ಷೆ ಎದುರಿಸುವ ಸಂದರ್ಭ ಬರುತ್ತದೆ ಎಂಬ ಊಹೆಯೂ ತಮಗೆ ಇರಲಿಲ್ಲ. ಆದರೆ, ತಾನು ಈ ಪರೀಕ್ಷೆಯಲ್ಲಿ ನಿಷ್ಕಂಳಕನಾಗಿ ಗೆದ್ದು ಬರುತ್ತೇನೆ ಎಂದು ಸಚಿವ ಈಶ್ವರಪ್ಪ Minister Eshwarappa ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಇಂದು ಬೆಂಗಳೂರಿಗೆ ತೆರಳುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ತಮ್ಮ ಮೇಲಿದೆ ಎಂಬ ನಂಬಿಕೆ ಇದೆ. ತಾನೂ ಈ ಅಗ್ನಿ ಪರೀಕ್ಷೆಯಿಂದ ಮುಕ್ತನಾಗಿ ಬಂದು ಜೀವನ ಇರುವ ತನಕ ರಾಜ್ಯ, ರಾಷ್ಟ್ರದ ಹಿತಕ್ಕಾಗಿ ಶ್ರಮಿಸುತ್ತೇನೆ ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರು ದೌರ್ಜನ್ಯವನ್ನು ತಡೆಯುವ ಪ್ರಯತ್ನ ಮಾಡೋಣ ಎಂದು ಸಂಕಲ್ಪ ಮಾಡಿದರು.

ರಾಜ್ಯದಲ್ಲಿ ಹಿಂದೂಗಳ ಸಂಘರ್ಷದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ರಾಜಕೀಯ ನಾಯಕರಿಗೆ ಸರಿಯಾದ ಪಾಠ ಕಲಿಸುವ ಕೆಲಸ ಮಾಡೋಣ ಎನ್ನುತ್ತಾ ತುಂಬಾ ಸಂತೋಷದಿಂದ, ಯಾವುದೇ ಆರೋಪಗಳಿಲ್ಲದೆ ಮುಕ್ತರಾಗಿ ಬನ್ನಿ ಎಂಬ ಹಾರೈಕೆಯಿಂದ ತನ್ನನ್ನು ಕಳುಹಿಸಿ ಕೊಡಿ ಎಂದು ನೆರೆದಿದ್ದವರಲ್ಲಿ ಮನವಿ ಮಾಡಿದರು.
ರಾಜೀನಾಮೆ ಪತ್ರ ಸಲ್ಲಿಸಲು ಈಶ್ವರಪ್ಪನವರು ಬೆಂಗಳೂರಿಗೆ ಹೊರಡುವ ವೇಳೆ ಕಣ್ಣೀರು ಸುರಿಸಿದ ಅಭಿಮಾನಿಗಳು ಹಾಗೂ ಪಕ್ಷದ ಮಹಿಳಾ ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ. ನೀವು ತಪ್ಪು ಮಾಡಿಲ್ಲ ಎಂದು ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ. ನನ್ನ ಮೇಲೆ ಆರೋಪ ಬಂದಿದೆ. ತನಿಖೆ ನಡೆದು ಸತ್ಯಾಂಶ ಹೊರಬಂದು ನಾನು ನಿರ್ದೋಷಿಯಾಗಿ ಹೊರಬರಬೇಕು ಎಂದರೆ ಸದ್ಯ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ದಾರಿ ಮಾಡಿಕೊಡಬೇಕು. ಹೀಗಾಗಿ ಕಣ್ಣೀರು ಸುರಿಸದೆ ಸಂತೋಷದಿಂದ ಕಳುಹಿಸಿಕೊಡಿ ಎಂದು ಬಾವುಕರಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post