ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಪಿಇಎಸ್‍ಐಟಿಎಂ ಕಾಲೇಜಿನ ಗ್ರಂಥಪಾಲಕರಾದ ಕೆ.ಎಲ್. ಚಂದ್ರಶೇಖರ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯ Kuvempu University ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ.
ಚಂದ್ರಶೇಖರ್ ಅವರು ಮಂಡಿಸಿದ “ಅವೆರ್‍ನೆಸ್ ಅಂಡ್ ಯೂಸ್ ಆಫ್ ಎಐಸಿಟಿಇ ಮ್ಯಾನ್‍ಡೆಟೆಡ್ ಇ-ರೀಸೋರ್‍ಸ್ಸ್ ಅಮಾಂಗ್ ಪೋಸ್ಟ್ ಗ್ರಾಜುಯೇಟ್ ಸ್ಟೂಡೆಂಟ್ಸ್ ಆಫ್ ಆಟೋನಮಸ್ ಎಂಜನೀಯರಿಂಗ್ ಕಾಲೇಜಸ್ ಆಫಿಲೇಟೆಡ್ ಟೂ ವಿಶ್ವೇಶ್ವರಯ್ಯ ಟೆಕ್ನಾಲಜಿ ಯೂನಿವರ್‍ಸಿಟಿ, ಕರ್ನಾಟಕ” ಎಂಬ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ನೀಡಿದೆ.
ಕುವೆಂಪು ವಿಶ್ಯವಿದ್ಯಾಲಯದ ಸ್ನಾತಕೊತ್ತರ ಗ್ರಂಥಾಲಯ ಮತ್ತು ಮಾಹಿತಿ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪಿ.ಧರಣಿಕುಮಾರ್ ಅವರು ಚಂದ್ರಶೇಖರ್ ಅವರಿಗೆ ಮಾರ್ಗದರ್ಶಕರಾಗಿದ್ದರು. ಚಂದ್ರಶೇಖರ್ ಅವರು ಶಿವಮೊಗ್ಗದ ಶ್ರೀಮತಿ ಸುನಂದ ಶ್ರೀ ಲೋಕನಾಥ್ ದಂಪತಿಗಳ ಸುಪುತ್ರ.
Also read: ಮೆಗ್ಗಾನ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಪ್ರಧಾನಿಯವರಿಗೆ ಆನ್’ಲೈನ್ ಮೂಲಕ ದೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post