ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೋಮ್ ಮಿನಿಸ್ಟರ್‌ಗೆ ಹೇಳ್ತೀಯಾ ಹೇಳ್ಕೋ ಹೋಗು ಎಂದು ಲಾರಿ ಮಾಲೀಕರಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದ್ದ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯ ಪಿಎಸ್‌ಐ ಜಯಪ್ಪ ನಾಯ್ಕ ಅವರನ್ನು ದಾವಣಗೆರೆಯ ಐಜಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ತೆರವಾದ ಜಾಗಕ್ಕೆ ಕುಂಸಿ ಠಾಣೆಯ ನವೀನ್ ಮಠಪತಿ ಅವರನ್ನು ನಿಯೋಜಿಸಲಾಗಿದೆ.
ಪಿಎಸ್‌ಐ ಜಯಪ್ಪ ನಾಯ್ಕ ಅವರ ವಿರುದ್ದ ಇತ್ತೀಚಿನ ಕೆಲವು ದಿನಗಳಿಂದ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ತೀರ್ಥಹಳ್ಳಿ ತಾಲೂಕಲ್ಲಿ ಮರಳು ದಂಧೆ ಅತಿಹೆಚ್ಚಾಗಿ ನಡೆಯುತ್ತಿದ್ದು ಕೆಲ ಲಾರಿ ಮಾಲೀಕರು ಮತ್ತು ಚಾಲಕರು ಪಿಎಸ್‌ಐ ವಿರುದ್ಧ ಎಸ್ಪಿಗೆ ದೂರು ನೀಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಜಯಪ್ಪ ನಾಯ್ಕ್ ಹೋಮ್ ಮಿನಿಸ್ಟರ್‌ಗೆ ಬೇಕಾದ್ರೆ ಹೇಳ್ಳೋ ಹೋಗಿ ಎನ್ನಲಾಗಿದ್ದು, ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಆಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಠಾಣೆಯಿಂದ ಎತ್ತಂಗಡಿ ಮಾಡಲಾಗಿದೆ.
Also read: ಶಿವಮೊಗ್ಗ | ಕೈಕೊಟ್ಟ ಪ್ರೇಯಸಿ ಖಾಸಗಿ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post