ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ ಸ್ಮಾರ್ಟ್‌ಸಿಟಿ ಹಾಗೂ ಸ್ವಚ್ಛತೆ ವಿಚಾರದಲ್ಲಿ ಆಗಿರುವ ಕೆಲಸದ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ MLA Eshwarappa ಸಂತಸ ವ್ಯಕ್ತಪಡಿಸಿ ಇದರಲ್ಲಿ ಅಧಿಕಾರಿಗಳು, ನೌಕರರು, ಹಾಗೂ ಅಷ್ಟೇ ಪ್ರಮಾಣದಲ್ಲಿ ಶಿವಮೊಗ್ಗ ನಗರದ ನಾಗರೀಕರು ಸ್ಪಂದಿಸಿದ್ದಾರೆ ಎಂದು ಹೇಳಿದರು.
ಅವರು ಇಂದು ಬೆಳಗ್ಗೆ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈಗ ನಡೆಯುತ್ತಿರುವ ಅಂದರೆ ಇನ್ನೂ ಮುಕ್ತಾಯವಾಗದ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಬಗ್ಗೆ ಆಕ್ಷೇಪ ಬರುತ್ತಿದೆ. ಸಂಪೂರ್ಣವಾಗಿ ಮುಗಿದಿರುವ ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಯಾವುದಾದರೂ ಲೋಪವಿದ್ದರೆ ಶಿವಮೊಗ್ಗ ಜನ ನೇರವಾಗಿ ನನ್ನನ್ನು ಸಂಪರ್ಕಿಸಿ. ನಾನು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಅಲ್ಲಿಗೆ ಬರುತ್ತೇನೆ. ಆ ಸಮಸ್ಯೆಯನ್ನು ಸರಿಪಡಿಸಲು ಸೂಚಿಸುತ್ತೇನೆ. ಗುತ್ತಿಗೆದಾರರಿಗೆ ಇನ್ನೂ ಸಂಪೂರ್ಣ ಹಣ ನೀಡಿಲ್ಲ ಎಂದು ಹೇಳಿದರು.
ವಿದ್ಯುತ್, ನೀರು ಹಾಗೂ ರಸ್ತೆ ಕಾಮಗಾರಿಗಳು ಬೇರೆ ವಿಭಾಗದಿಂದ ನಡೆಯಬೇಕಾಗಿರುವುದರಿಂದ ಅಲ್ಲಿ ಸಮನ್ವಯತೆ ಕಷ್ಟ. ಕೆಲವು ಇಲಾಖೆಗಳಲ್ಲಿ ಅನುಮತಿ ಪಡೆಯುವುದರಲ್ಲಿ ತುಂಬಾ ಸಮಯ ಬೇಕಾಗುತ್ತದೆ ಎಂದರು.
ಸ್ವಚ್ಛತೆ ವಿಚಾರದಲ್ಲಿ ದೇಶದಲ್ಲೆ ಉನ್ನತ ಸ್ಥಾನ ಪಡೆದಿರುವುದು ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವುದು ಗಮನಿಸಿದ್ದೀರಿ. ಅತಿಹೆಚ್ಚಾಗಿ ಬೆಳೆಯುತ್ತಿರುವ ಶಿವಮೊಗ್ಗ ನಗರದ ನಾಗರೀಕರ ಸೌಕರ್ಯಗಳನ್ನು ಸರಿಪಡಿಸುವಷ್ಟು ಪೌರಕಾರ್ಮಿಕರನ್ನು ನೇಮಿಸಿಕೊಂಡಿಲ್ಲ. ಇದು ರಾಜ್ಯದ ಸಮಸ್ಯೆ, ಯಂತ್ರಗಳನ್ನು ಹಾಗೂ ವಾಹನಗಳನ್ನು ಬಳಸುವ ಮೂಲಕ ಸರಿಪಡಿಸುವ ಕೆಲಸವಾಗುತ್ತಿದೆ. ಮನೆ-ಮನೆ ಕಸ ಸಂಗ್ರಹದಲ್ಲಿ ನಾಗರೀಕರ ಸ್ಪಂದನೆ ಗಮನೀಯವಾದುದು ಅವರಿಗೆ ಅಭಿನಂದನೆಗಳು ಎಂದರು.
ಭಾರತ ವಿಶ್ವಗುರುವಾಗುವ ದಿನ ಬಂದಿದೆ. ಇಡೀ ವಿಶ್ವ ನಮ್ಮತ್ತ ನೋಡುತ್ತಿದೆ. ನೈತಿಕತೆ, ಧಾರ್ಮಿಕತೆ ನೆಲೆಯಲ್ಲಿ ಮೋದಿ ಅವರ ನೇತೃತ್ವದ ಸರ್ಕಾರ ಮತಾಂದರ ಚಟುವಟಿಕೆಗಳನ್ನು ಸಮರ್ಪಕವಾಗಿ ಹತ್ತಿಕ್ಕುತ್ತಿದೆ. ಇದು ವಿಶ್ವದಲ್ಲೇ ಮಾದರಿ ಎಂದರು.
ಮುಸ್ಲಿಂ ಹಿರಿಯರಿಗೆ ಈಗಲೂ ಹೇಳುತ್ತಿದ್ದೇನೆ. ನಿಮ್ಮ ನಿಮ್ಮ ಮಕ್ಕಳನ್ನು ಪಿಎಫ್‌ಐನಂತಹ ಸಂಘಟನೆಗಳ ಜೊತೆ ಸೇರಲು ಬಿಡಬೇಡಿ. ಇದರಿಂದ ನಿಮ್ಮ ಕುಟುಂಬಕ್ಕೆ, ಜಿಲ್ಲೆಗೆ, ರಾಜ್ಯಕ್ಕೆ ದೇಶಕ್ಕೆ ದೊಡ್ಡ ದ್ರೋಹವಾಗುತ್ತದೆ. ಅವರನ್ನು ಸರಿಯಾಗಿ ಬೆಳಸಿ. ಶಿವಮೊಗ್ಗದಲ್ಲಿ ಇಂತಹ ಗಲಭೆಗಳನ್ನು ಸಮರ್ಪಕವಾಗಿ ಹತ್ತಿಕ್ಕಿದ ಪೊಲೀಸರಿಗೆ ಅಭಿನಂದನೆಗಳು.
-ಈಶ್ವರಪ್ಪ, ಶಾಸಕರು.
Also read: ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಶಿವಮೊಗ್ಗದಲ್ಲಿ ಸ್ಥಾಪಿಸಿ: ಶಾಸಕ ಡಿ.ಎಸ್. ಅರುಣ್ ಮನವಿ
ಪಂಚಮಸಾಲಿ, ಕುರುಬ ಸಮಾಜ ಸೇರಿದಂತೆ ಮೀಸಲಾತಿಯ ಬಗ್ಗೆ ಕೇಳಿದ ಎಲ್ಲರ ವರದಿಗಳು ಈಗ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದ್ದು, ಇದರ ವರದಿ ನಂತರ ನಿರ್ಧಾರ ಕೈಗೊಂಡು ಅನುಕೂಲವನ್ನು ರಾಜ್ಯ ಸರ್ಕಾರ ಮಾಡಿಕೊಡುತ್ತದೆ. ದಲಿತರಿಗೆ ಮೀಸಲಾತಿ ನೀಡಿ, 10 ವರ್ಷಗಳಲ್ಲಿ ಅವರು ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲ ಸಮುದಾಯದ ಸರಿಸಮಕ್ಕೆ ಬರಬೇಕು ಎನ್ನುವುದು ಅಂಬೇಡ್ಕರ್ ಅವರ ಆಸೆಯಾಗಿತ್ತು. ಆದರೆ, ಸ್ವಾತಂತ್ರ ಬಂದು 75 ವರ್ಷವಾದರೂ ಅದು ಈಡೇರಿಲ್ಲ. ಇಂದಿಗೂ ಬಹಳಷ್ಟು ದಲಿತರಿಗೆ ಶಿಕ್ಷಣವಿಲ್ಲ, ಉದ್ಯೋಗವಿಲ್ಲ, ಆಹಾರವಿಲ್ಲ. ಹೀಗಾಗಿ, ಇದನ್ನು ಸಕಾರಗೊಳಿಸುವ ಭಾಗವಾಗಿ ರಾಜ್ಯ ಸರ್ಕಾರ ನಿನ್ನೆ ಮೀಸಲಾತಿ ಹೆಚ್ಚಿಸಿದ್ದು, ಈ ನಿರ್ಧಾರ ಸ್ವಾಗತಾರ್ಹ ಎಂದರು.
ಬರುವ ಅ.30ರಂದು ಕಲಬುರ್ಗಿಯಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಯಲಿದೆ. ಶಿವಮೊಗ್ಗದಲ್ಲಿ ಬರುವ ಜನವರಿ ತಿಂಗಳು ಇಂತಹ ಸಮಾವೇಶ ನಡೆಯಲಿದ್ದು, ಸಾರ್ವಜನಿಕ ಸ್ಪಂದನೆಗಾಗಿ ನಡೆಸುತ್ತಿರುವ ಇಂತಹ ಸಮಾವೇಶಗಳು ರಾಜ್ಯವ್ಯಾಪಿ ನಡೆಯುತ್ತವೆ ಎಂದರು.
ಸಂವಾದದಲ್ಲಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಗೌರವಾಧ್ಯಕ್ಷ ಎಸ್. ಚಂದ್ರಕಾಂತ್ ಉಪಸ್ಥಿತರಿದ್ದರು. ಗೋ.ವಾ.ಮೋಹನ್ ಸರ್ವರನ್ನು ಸ್ವಾಗತಿಸಿ ವಂದಿಸಿದರು.
ಶಿವಮೊಗ್ಗದ ಯಾವೊಬ್ಬ ಹಿಂದೂ ಗೂಂಡಾ ಅಲ್ಲ!
2008ರಿಂದ ಆರಂಭಗೊಂಡ ಹಿಂದೂ-ಮುಸ್ಲಿಂ ಗಲಾಟೆ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಒಬ್ಬನೇ ಒಬ್ಬ ಹಿಂದೂ ರೌಡಿಯಲ್ಲ, ಗೂಂಡಾ ಅಲ್ಲ. ನಾನು ಮುಸ್ಲಿಂ ಗೂಂಡಾಗಳು ಎಂದು ಪದ ಬಳಸಿದ್ದೇನೆ. ಮುಸ್ಲಿಂರಲ್ಲೂ ರಾಷ್ಟ್ರಭಕ್ತರು, ದೇಶಪ್ರೇಮಿಗಳು, ವಿಚಾರವಂತರೂ ಇದ್ದಾರೆ ಆದರೆ ಕೆಲ ಮುಸ್ಲಿಂ ಗೂಂಡಾಗಳ ವರ್ತನೆ ಹಿಂದೂಗಳ ಕೊಲೆಗೆ ಕಾರಣವಾಗಿತ್ತು. ಹಾಗಾಗೀ ಈ ಪದ ಬಳಸಿದ್ದೇ. ಶಿವಮೊಗ್ಗದಲ್ಲಿ ಆ ಪದವನ್ನು ಹಿಂದೂ ಹಾಗೂ ಕ್ರೈಸ್ತರಿಗೆ ಹೇಗೆ ಬಳಸಲಿ ಅಂತಹ ಯಾವ ಕಾರ್ಯ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post