ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್ ಅವರ ಪುತ್ರನ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಸೂಳೆಬೈಲ್ ಪ್ರದೇಶದಲ್ಲಿ ಉದ್ವಿಗ್ನಗೊಳ್ಳುವ ಸಾಧ್ಯತೆಯಿದ್ದ ಪರಿಸ್ಥಿತಿಯನ್ನು ಪೊಲೀಸರು ಶಾಂತಗೊಳಿಸಿದ್ದಾರೆ.
Also read: ಕೈಗಾರಿಕೋದ್ಯಮಿಯಾಗಲು ಯುವ ಉದ್ಯಮಿಗಳು ಧೈರ್ಯದಿಂದ ಮುಂದೆ ಬರಬೇಕು
ಇಂದು ರಾತ್ರಿ ವೇಳೆ ಕಾರೊಂದರ ಮೇಲೆ ದುಷ್ಕರ್ಮಿಗಳು ಘೋಷಣೆ ಕೂಗಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಕಾರು ಭಾನುಪ್ರಕಾಶ್ ಅವರ ಪುತ್ರನಿಗೆ ಸೇರಿದ್ದು ಎಂದು ವದಂತಿಗಳು ಹಬ್ಬಿವೆಯಾದರೂ ಯಾರಿಗೆ ಸೇರಿದ್ದು ಎನ್ನುವುದು ಇನ್ನೂ ಖಚಿತಗೊಂಡಿಲ್ಲ.
9 ಗಂಟೆ ವೇಳೆಗೆ ಘಟನೆ ನಡೆದಿದೆ ಎನ್ನಲಾಗಿದ್ದು, ಕಾರಿನ ಹಿಂಬದಿ ಗಾಜು ಪುಡಿಯಾಗಿದೆ.
ಕಲ್ಲು ತೂರಾಟ ನಡೆದ ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಪೊಲೀಸರು ಕ್ಷಿಪ್ರ ಕ್ರಮಗಳನ್ನು ಕೈಗೊಂಡು ಸಂಪೂರ್ಣ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಗರದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತುಂಗಾನಗರ ಪೊಲೀಸರು ಘಟನೆಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇಲ್ಲಿನ ಚೌಡಮ್ಮ ದೇವಾಲಯದ ರಸ್ತೆಯಲ್ಲಿ ನಾಕಾಬಂಧಿ ಹಾಕಲಾಗಿದ್ದು, ಇಡಿಯ ಪ್ರದೇಶ ಸದ್ಯ ಶಾಂತವಾಗಿದೆ.
ಜನರು ಯಾವುದೇ ರೀತಿಯ ವದಂತಿಗಳಗೆ, ಗಾಳಿಸುದ್ದಿಗಳಿಗೆ ಕಿವಿಗೊಡಬಾರದು ಹಾಗೂ ಸತ್ಯಾಸತ್ಯತೆ ತಿಳಿಯದೇ ಯಾವುದೇ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಾರದು ಎಂದು ಕಲ್ಪ ಮೀಡಿಯಾ ಹೌಸ್ ವಿನಂತಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post