ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ 31 ಮತ್ತು 32ನೇ ಘಟಿಕೋತ್ಸವ Kuvempu University 31st and 32nd Convocation ಇಂದು ಜರುಗಿದ್ದು, 31ನೇ ಘಟಿಕೋತ್ಸವದಲ್ಲಿ ಪ್ರಣೀತಾ ತಿಮ್ಮಪ್ಪಗೌಡ ಕನ್ನಡ ಭಾಷಾ ವಿಭಾಗದಲ್ಲಿ 8 ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡು ಅತಿಹೆಚ್ಚು ಸ್ವರ್ಣ ಪದಕ ಪಡೆದಿದ್ದಾರೆ.
ಇನ್ನು 32ನೇ ಘಟಿಕೋತ್ಸವದಲ್ಲಿ ದಿವ್ಯಾ ಹಣಗೆರೆಕಟ್ಟೆ 11 ಚಿನ್ನದ ಪದಕ ಗಳಿಸಿ ಅತಿ ಹೆಚ್ಚು ಸ್ವಣ ಪದಕ ಪಡೆದಿದ್ದಾರೆ. ಯತೀಶ್ 5, ನವ್ಯಾ ಕೆ. ನಾಯಕ್ 5, ತನುಷಾ 5, ಅನುಷಾ 5 ಚಿನ್ನದ ಪದಕ ಪಡೆದಿದ್ದಾರೆ.
ಪ್ರಣೀತಾ ತಿಮ್ಮಪ್ಪಗೌಡಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಣೀತಾ ತಿಮ್ಮಪ್ಪಗೌಡ, ಕನ್ನಡ ಭಾಷೆಯಲ್ಲಿ ಸುವರ್ಣ ಪದಕ ಲಭಿಸಿರುವುದು ತುಂಬಾ ಸಂತಸ ಉಂಟು ಮಾಡಿದೆ. ತನ್ನ ಈ ಸಾಧನೆಗೆ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ತಮ್ಮ ಪ್ರಾಧ್ಯಾಪಕರಾದ ಪ್ರಶಾಂತ್ ನಾಯ್ಕ್, ಸಿದ್ಧೇಶ್ವರ ಶರ್ಮಾ, ರವಿನಾಯಕ್ ಮತ್ತು ರಾಜೀವ್ ಸೇರಿದಂಥೆ ಎಲ್ಲರಿಗೂ ಧನ್ಯವಾದ ತಿಳಿಸಿದರು.
ತಾವು ಕೊಪ್ಪ ತಾಲೂಕಿನ ಹರಿಪುರದವರಾಗಿದ್ದು, ಸಿದ್ಧರಮಠದಲ್ಲಿ ವಾಸವಾಗಿದ್ದೇವೆ. ತಂದೆ ಬಿಎಸ್‌ಎನ್‌ಎಲ್ ಉದ್ಯೋಗಿ, ತಾಯಿ ಶಶಿಕಲಾ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಪೋಷಕರು ಯಾವುದೇ ಒತ್ತಡ ಹೇರದೆ, ವಿದ್ಯಾಭ್ಯಾಸ ಮತ್ತು ಉತ್ತಮ ಕಲಿಕೆಗೆ ಪೂರಕ ವಾತಾವರಣ ನೀಡಿ, ಉತ್ತೇಜಿಸಿರುವುದು ತಮ್ಮ ಈ ಸಾಧನೆ ಕಾರಣ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯಲ್ಲಿ ಹೆಚ್ಚಿನ ಪುಸ್ತಕ ಸಂಗ್ರಹವಿದೆ. ಅಧ್ಯಯನಕ್ಕೆ ಅವಶ್ಯವಿರುವ ಎಲ್ಲಾ ಅಗತ್ಯ ಸಾಮಾಗ್ರಿಗಳು ಇಲ್ಲಿ ದೊರೆಯುತ್ತದೆ. ಎಲ್ಲಾ ರೀತಿಯ ಸಾಂಸ್ಕೃತಿಕ ಮತ್ತು ಕ್ರೀಡೆಗಳಿಗೂ ಕುವೆಂಪು ವಿವಿ ಅಧ್ಯಾಪಕ ವರ್ಗ ಪ್ರೋತ್ಸಾಹಿಸಿದ್ದಾರೆ. ರ್‍ಯಾಂಕ್ ಸಿಕ್ಕ ತಕ್ಷಣ ಕೆಲಸ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ನಮ್ಮಲ್ಲಿರುವ ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರಿಂದ ಸಾಧನೆ ಹಾದಿ ಸುಗಮವಾಗಲಿದೆ ಎಂದರು.

ಕನ್ನಡ ಭಾಷೆಗೆ ಶಿಕ್ಷಕ ವೃತ್ತಿ ಮಾತ್ರವಲ್ಲದೆ ಎಲ್ಲಾ ವಿಭಾಗಗಳಲ್ಲಿ ಅವಕಾಶವಿದೆ. ತಾನು ಡಿಜಿಟಿಲ್ ಮೀಡಿಯಾ ಸೇರಿದಂತೆ ರೇಡಿಯೋ ಜಾಕಿಯಾಗಿಯೂ ಸಹ ಕಾರ್ಯ ನಿರ್ವಹಿಸಿದ್ದೇನೆ. ನಮ್ಮಲ್ಲಿರುವ ಕೌಶಲ್ಯವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡರೆ ಎಲ್ಲಿ ಬೇಕಾದರು ವೃತ್ತಿ ನಿಭಾಯಿಸಬಹುದು ಎಂದರು.
ತಾವು ಭರತನಾಟ್ಯದಲ್ಲಿ ವಿದ್ವತ್ ಮುಗಿಸಿದ್ದು, ಚಲನಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿ ಕೆಲಸ ಮಾಡಿದ್ದೇನೆ. ತನಗೆ ಇಷ್ಟವಿರುವ, ನೆಮ್ಮದಿ ಕೊಡುವ, ತೃಪ್ತಿ ಸಿಗುವ ಕೆಲಸಗಳನ್ನು ಒಳ್ಳೆಯ ರೀತಿಯಲ್ಲಿ ಮಾಡುತ್ತೇನೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post