ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಸೆ.4ರ ನಾಳೆ ಬೆಳಗ್ಗೆ 11ಕ್ಕೆ ಆರ್‌ಟಿಓ ಕಛೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ದಿನಪತ್ರಿಕೆ ವಿತರಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಸರ್ಜಿ ಫೌಂಡೇಷನ್ ಅಧ್ಯಕ್ಷ ಡಾ. ಧನಂಜಯ ಸರ್ಜಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸತ್ಯನಾರಾಯಣ ವಹಿಸಲಿದ್ದಾರೆ.

Also read: An interactive session conducted today for Stakeholders
ಕಾರ್ಯಕ್ರಮದಲ್ಲಿ ದಿನಪತ್ರಿಕೆ ವಿತರಕರಾದ ಸಂಜಯ್, ಪ್ರಕಾಶ್, ಎಚ್.ವಿ. ಸತ್ಯನಾರಾಯಣ, ಶಿಕಾರಿಪುರದ ಗಿಡೇಶ್, ಭದ್ರಾವತಿಯ ಕೃಷ್ಣಮೂರ್ತಿ, ಸಾಗರದ ರಮೇಶ್, ತೀರ್ಥಹಳ್ಳಿಯ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಗುವುದು.











Discussion about this post