ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ- ಭದ್ರಾವತಿ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.34ರಲ್ಲಿ ರೈಲ್ವೆ ಓವರ್ ಬ್ರಿಡ್ಜ್ (ಆರ್‍ಒಬಿ) ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕೆಳಕಂಡ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶಿಸಿದ್ದಾರೆ.
ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ಮಿನಿ ನಗರ ಸಾರಿಗೆ ಬಸ್‍ಗಳು, ಕಾರು, ಟ್ಯಾಕ್ಸಿ, ಮತ್ತು ಲಘು ವಾಹನಗಳು ಕಡದಕಟ್ಟೆ ವಿಧ್ಯಾಧಿರಾಜ ಸಭಾಭವನ ಪಕ್ಕದ ರಸ್ತೆಯಿಂದ ಹೆಬ್ಬಂಡಿ ಮಾರ್ಗವಾಗಿ ಲಕ್ಷ್ಮಿಪುರ ಹಾಗೂ ಬಿಳಿಕಿ ಕ್ರಾಸ್ ಮೂಲಕ ಸಂಚರಿಸುವುದು. ಎಲ್ಲಾ ರೀತಿಯ ಭಾರಿ ವಾಹನಗಳು ಉಂಬ್ಳೆಬೈಲ್ ರಸ್ತೆ ಮೂಲಕ-ಕೃಷ್ಣಪ್ಪ ವೃತ್ತ-ಸಿದ್ದಾಪುರ ಸರ್ಕಲ್ ಬಿಳಿಕಿ ಕ್ರಾಸ್ ಮುಖಾಂತರ ಸಂಚರಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
Also read: ಏ.1ರಂದು ರಾಜ್ಯಕ್ಕೆ ಅಮಿತ್ ಷಾ : ಯಶಸ್ವಿನಿ, ನಂದಿನ ಕ್ಷೀರ ಅಭಿವೃದ್ಧಿ ಬ್ಯಾಂಕಿಗೆ ಚಾಲನೆ – ಸಿಎಂ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post