ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಂದೆಡೆ ಐಎಸ್’ಐಎಸ್ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಶಂಕಿತ ಉಗ್ರರನ್ನು ಬಂಧಿಸಿದ್ದು, ಆನಂತರ ಪಿಎಫ್’ಐ ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ನಗರಕ್ಕೆ `ರಾ’ ಟೀಂ ಎಂಟ್ರಿ ಕೊಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತಂತೆ ಮಾಹಿತಿಗಳು ತಿಳಿದುಬಂದಿದ್ದು, ದೇಶದ ಹೊರಗಡೆಯಲ್ಲಿ ಭಾರತದ ಭದ್ರತೆಗೆ ಧಕ್ಕೆ ತರುವಂತಹ ವಿಚಾರಗಳ ಕುರಿತಾಗಿ ಭದ್ರತೆಯ ಹೊಣೆ ಹೊತ್ತಿರುವ ರಾ (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) RAW (Research And Analysis Wing) ತಂಡ ನಗರಕ್ಕೆ ಆಗಮಿಸಿ, ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗಿದೆ.

Also read: ಸೆ.26ರಿಂದ ಅ.5ರವರೆಗೆ ನಮ್ಮೂರ ನಾಡಹಬ್ಬ: ಅದ್ಧೂರಿ ದಸರಾ ಕಾರ್ಯಕ್ರಮಗಳ ವಿವರ ಇಲ್ಲಿದೆ ನೋಡಿ
ಇದರ ನಡುವೆಯೇ ಶಿವಮೊಗ್ಗಕ್ಕೆ ರಾ ತಂಡ ಭೇಟಿ ನೀಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಮಾಹಿತಿ ಕಲೆ ಹಾಕುತ್ತಿದೆ ಎಂದು ಹೇಳಲಾಗಿದೆ. ಬಂಧಿತ ಶಂಕಿತ ಉಗ್ರರನ್ನೂ ಸಹ ವಿಚಾರಣೆ ನಡೆಸಿದೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.











Discussion about this post