ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಮೇಯರ್ ಏಳುಮಲೈ(ಕೇಬಲ್ ಬಾಬು) ಅವರು ಜೆಡಿಎಸ್ ತೊರೆದು ಅಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಎಎಪಿ ರಾಜ್ಯ ಪದಾಧಿಕಾರಿಗಳ ಸಭೆ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಏಳು ಮಲೈ, ಜೆಡಿಎಸ್ ನನಗೆ ಇದುವರೆಗೂ ಒಳ್ಳೆ ಸ್ಥಾನಮಾನವನ್ನು ನೀಡಿದ್ದು ತುಂಬ ಗೌರವಯುತವಾಗಿ ನಡೆಸಿಕೊಂಡಿದೆ. ಆದರೆ ದೆಹಲಿ ಹಾಗೂ ಪಂಜಾಬ್’ನಲ್ಲಿ ಎಎಪಿ ಮಾಡುತ್ತಿರುವ ಜನಪರ ಕೆಲಸಗಳನ್ನು ನೋಡಿದಾಗ ಮುಂದಿನ ದಿನಗಳಲ್ಲಿ ನಾವು ರಾಜ್ಯದ ಜನರು ಹಾಗೂ ಜಿಲ್ಲೆಯ ಜನರಿಗೆ ಇನ್ನೂ ಹೆಚ್ಚಿನ ಸೇವೆಯನ್ನು ಒದಗಿಸಬಹುದು ಎನ್ನುವ ಕಾರಣಕ್ಕೆ ನಾನು ಎಎಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ದಾರೆ.
Also read: ಭದ್ರಾವತಿ: ಅಕಾಲಿಕ ಮಳೆಯಿಂದ ಆತಂಕ ಸೃಷ್ಠಿ – ಹೊಲ, ಗದ್ದೆಗಳು ಜಲಾವೃತ
ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ, ದೆಹಲಿ ಮುಖಂಡ ದಿಲೀಪ್ ಪಾಂಡೆ ಅವರ ನೇತೃತ್ವದಲ್ಲಿ ರಾಜ್ಯ ನಾಯಕರುಗಳಾದ ದರ್ಶನ್ ಜೈನ್, ವಿಜಯ್ ಶರ್ಮಾ, ರೈತ ಮುಖಂಡರುಗಳಾದ ಕೋಡಿಹಳ್ಳಿ ಚಂದ್ರಶೇಖರ್, ಶಿವಮೊಗ್ಗ ಜಿಲ್ಲಾ ಮುಖಂಡರುಗಳಾದ ಡಿ.ಆರ್. ಮನೋಹರ್ ಗೌಡ, ವಕೀಲ ದಿವಾಕರ್, ಯುವ ಮುಖಂಡರುಗಳಾದ ಕಿರಣ್. ಕೆ ಲಕ್ಷ್ಮೀಶ ಇವರುಗಳ ಸಮ್ಮುಖದಲ್ಲಿ ಹಾಗೂ ಸಭೆಯಲ್ಲಿ ಸೇರಿದ್ದ ಸಾವಿರಾರು ರಾಜ್ಯ ಪದಾಧಿಕಾರಿಗಳ ಎದುರಲ್ಲಿ ಜೆಡಿಎಸ್ ತೊರೆದು ಎಎಪಿ ಸೇರ್ಪಡೆಗೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post