ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರವೀಂದ್ರ ನಗರ ಶ್ರೀಪ್ರಸನ್ನ ಗಣಪತಿ Ravindranagara Prasanna Ganapathi Temple ಬಲಮುರಿ ದೇವರ ಸನ್ನಿಧಿಯಲ್ಲಿ ಶ್ರೀ ಶಂಕರ ಜಯಂತಿ ಅಂಗವಾಗಿ ಆ.ಪ. ರಾಮಭಟ್ಟ ನೇತೃತ್ವದಲ್ಲಿ ಮೇ 12ರಿಂದ 15ರವರೆಗೆ ಪ್ರತಿದಿನ ಸಂಜೆ 5 ರಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
12ರ ಗುರುವಾರ ಸಂಜೆ ಶ್ರೀಮದ್ ಭಗವದ್ಗೀತೆ ಪಾರಾಯಣ, 13ರಂದು ಸಾಮೂಹಿಕ ಸೌಂದರ್ಯ ಲಹರಿ ಪಠಣ, 14ರಂದು ಸಾಮೂಹಿಕವಾಗಿ ಶಿವಾನಂದ ಲಹರಿ ಪಠಣ, 15ರಂದು ಸಾಮೂಹಿಕವಾಗಿ ಶ್ರೀಲಲಿತಾ ಸಹಸ್ರನಾಮ, ಶ್ರೀ ವಿಷ್ಣು ಸಹಸ್ರನಾಮ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ.
ಪ್ರತಿದಿನ ಸಂಜೆ ಪಾರಾಯಣ ನಂತರ ದೇವರಿಗೆ ಹಾಗೂ ಶ್ರೀ ಆದಿ ಶಂಕರಾಚಾರ್ಯರಿಗೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆ ಏರ್ಪಡಿಸಲಾಗಿದೆ.
Also read: ಎಸ್. ವರದರಾಜ ಅವರಿಗೆ ದಾವಣಗೆರೆ ವಿವಿ ಪಿಎಚ್‌ಡಿ ಪದವಿ ಪ್ರದಾನ
ವಿಶೇಷ ಸೂಚನೆ: ಮೇ 22ರ ಭಾನುವಾರ ಕುವೆಂಪು ರಂಗಮಂದಿರದಲ್ಲಿ ನಡೆಯುವ ಸಾಮೂಹಿಕ ವಿಷ್ಣು ಸಹಸ್ರನಾಮದ ಉಚಿತ ಪಾಸ್ ಗಳನ್ನೂ ಕೊಡಲಾಗುವುದು ಎಂದು ಸಂಸ್ಕಾರ ಪ್ರತಿಷ್ಠಾನ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post