No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಮೇ 27ರಂದು ಶ್ರೀನಿವಾಸ ಕಲ್ಯಾಣ ವಿಶೇಷ ಉಪನ್ಯಾಸ, ಪುಸ್ತಕ ಬಿಡುಗಡೆ ಕಾರ್ಯಕ್ರಮ

ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ದಂಪತಿಗಳಿಗೆ ಅಭಿನಂದನೆ | ಶ್ರೀಗಂಧ ಸಂಸ್ಥೆ ವತಿಯಿಂದ ಆಯೋಜನೆ

kalpa News by kalpa News
May 23, 2022
in ಶಿವಮೊಗ್ಗ
0
ಮೇ 27ರಂದು ಶ್ರೀನಿವಾಸ ಕಲ್ಯಾಣ ವಿಶೇಷ ಉಪನ್ಯಾಸ, ಪುಸ್ತಕ ಬಿಡುಗಡೆ ಕಾರ್ಯಕ್ರಮ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಶ್ರೀಗಂಧ Shrigandha ಸಂಸ್ಥೆಯ ವತಿಯಿಂದ ಮೇ 27ರಂದು ಶ್ರೀನಿವಾಸ ಕಲ್ಯಾಣ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಧಾರ್ಮಿಕ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಮಹೋನ್ನತ ಸೇವೆಗಾಗಿ ನಗರದ ನಾಗರಿಕರ ಪರವಾಗಿ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ದಂಪತಿಗಳಿಗೆ ಅಭಿನಂದನೆ ಹಾಗೂ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಅಂಕ ಪಡೆದ ಐದು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀಗಂಧ ಸಂಚಾಲಕ ಬಿ. ಆರ್. ಮಧುಸೂದನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಸಂಜೆ 6:30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಂಕಣಕಾರರೂ ಮತ್ತು ಶ್ರೀಗಂಧ ಸಂಸ್ಥೆಯ ಪದಾಧಿಕಾರಿಗಳೂ ಅದ ಕೆ.ಜಿ. ಕೃಷ್ಣಾನಂದ ಅವರ  ಸಕಾರಾತ್ಮಕ ಲೇಖನಗಳ ಸಂಗ್ರಹ ರೂಪದ ಪುಸ್ತಕ “ಒಳಸುಳಿಯೊಳಗಿಳಿದು” ಬಿಡುಗಡೆಗೊಳಿಸಲಾಗುವುದು.

ಉಡುಪಿಯ ಶ್ರೀ ಪೇಜಾವರ ಮಠದ ಪೀಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡಲಿದ್ದು, ಶಾಸಕ ಮತ್ತು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ K S Eshwarappa ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಸಂಸ್ಥೆಯ ಸಂಚಾಲಕರಾದ ಬಿ.ಅರ್ .ಮಧುಸೂದನ ಮತ್ತು ಶ್ರೀಗಂಧ ಬಳಗ ವಿನಂತಿಸಿದೆ.

ಶ್ರೀಗಂಧ ಕಾರ್ಯವೈಖರಿ:
ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ತನ್ನ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಿಂದಾಗಿ ಜನಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.  ಮಠ ಮಂದಿರಗಳ ಭಾಗವಾಗಿದ್ದ ರಾಮಾಯಣ ಮಹಾಭಾರತ ಭಗವದ್ಗೀತೆ ಪುರಾಣ ಉಪನಿಷತ್ತು ಮುಂತಾದವುಗಳನ್ನು ಅದರಾಚೆ ತರುವಲ್ಲಿ ಮತ್ತು ಅವುಗಳು ಸಮಾಜದ ಕಟ್ಟಕಡೆಯ ಜನರಿಗೂ ಮುಟ್ಟುವಂತೆ ಮಾಡುವ ನಿಟ್ಟಿನಲ್ಲಿ ಬಯಲು ರಂಗಮಂದಿರ ಮತ್ತು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಜನರ ಬಳಿಗೇ ದಾರ್ಮಿಕತೆಯ ಸಾತ್ವಿಕ ಸುಗಂಧವನ್ನು ತಲುಪಿಸುವಲ್ಲಿ ಯಶಸ್ವಿಯಾದ ಸಂಸ್ಥೆ ಕೂಡ.

ವೇದ-ಉಪನಿಷತ್ತು-ಪುರಾಣ-ಪುಣ್ಯಕಥೆ-ಪೂಜೆ-ಭಜನೆ ಕಲೆ-ಸಾಹಿತ್ಯ-ಸಂಗೀತ-ಲಘುಸಂಗೀತ-ನಾಟ್ಯ-ಗಮಕ-ಧ್ಯಾನ-ಪ್ರಾಣಾಯಾಮ-ಆರೋಗ್ಯ ಶಿಬಿರ ಹೀಗೆ ತನ್ನ ಭಾವಾಭಿವ್ಯಕ್ತಿಯ ಧ್ಯೇಯ ವಾಕ್ಯವಾದ ಸದ್ಬಾವ-ಸದ್ವಿಚಾರ-ಸದಭಿರುಚಿ-ಸತ್ಕಾರ್ಯದ ಮೂಲಕ ಜನರ ಸರ್ವಾಂಗೀಣ ಮನೋರಂಜನೆಯ ಜೊತೆಗೆ ಆರೋಗ್ಯ ಮತ್ತು ಜನಸೇವಾ ಕಾರ್ಯಗಳಿಗೆ ಸುಸಂಸ್ಕೃತ ಸಜ್ಜನರ ತಂಡದೊಡನೆ ನಗರದ ಜನಪ್ರಿಯ ಶಾಸಕರೂ ಸಂಸ್ಥೆಯ ಅಧ್ಯಕ್ಷರೂ ಅದ ಕೆ.ಎಸ್.ಈಶ್ವರಪ್ಪನವರ ಮಾರ್ಗದರ್ಶನದಂತೆ ಬಿ ಆರ್ ಮಧುಸೂದನರವರ ಸಂಚಾಲಕತ್ವದಲ್ಲಿ ಶ್ರೀಗಂಧ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ಪರಿಚಯ:
ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು ಮಹಾನ್ ಸಂಸ್ಕೃತ ಭಾಷಾ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದಾರೆ. ಆಚಾರ್ಯರು ಮಧ್ವ ತತ್ವಜ್ಞಾನಕ್ಕೆ ಜಾಗತಿಕ ಮಟ್ಟದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ. ತಾಳೆಗರಿಗಳಲ್ಲಿ ಅಜ್ಞಾತವಾಗಿದ್ದ ಸಾವಿರಾರು ಸ್ತೋತ್ರ ಮತ್ತು ಮಹತ್ವದ ವಿಚಾರಗಳು ಆಚಾರ್ಯರ ಮಹತ್ವದ ಸುದೀರ್ಘ ಸಂಶೋಧನೆಗಳಿಂದ ಬೆಳಕು ಕಂಡಿವೆ. ಈಗಾಗಲೇ ಸುಮಾರು 200ರಷ್ಟು ಗ್ರಂಥಗಳ ರಚನೆ ಹಾಗೂ ಭಾಷಾಂತರಗಳನ್ನು ಆಚಾರ್ಯರು ಮಾಡಿದ್ದಾರೆ.

ವ್ಯಾಕರಣ, ಮೀಮಾಂಸೆ, ತರ್ಕ, ವೇದ, ವೇದಾಂತಗಳಲ್ಲಿ ಅಪಾರ ವಿದ್ವತ್ತನ್ನು ಹೊಂದಿರುವ ಆಚಾರ್ಯರು, ಆಚಾರ್ಯ ಮಧ್ವರ ಸರ್ವಮೂಲ ಗ್ರಂಥಗಳ ಮಹತ್ವಪೂರ್ಣ ಸಂಪಾದನೆಗಾಗಿ ಡಿ.ಲಿಟ್ ಪದವಿ ಗಳಿಸಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸಹಾ ಸೇವೆ ಸಲ್ಲಿಸಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಯಾರುಮಾಡಿರುವ ಆಚಾರ್ಯರು, ತಮ್ಮ ವಿದ್ವತೂರ್ಣ ಸಂಶೋಧನಾ ಚಟುವಟಿಕೆಗಳಲ್ಲಿನ ಆಸಕ್ತಿಗಳಿಗೆ ಹೆಚ್ಚಿನ ಸಮಯ ವಿನಿಯೋಗಿಸಲಿಕ್ಕಾಗಿ ಸ್ವಯಂ ನಿವೃತ್ತಿ ಪಡೆದವರು. ಅವರ ಸಂಶೋಧನೆ ಮತ್ತು ಜ್ಞಾನ ಪ್ರಸರಣ ಕಾರ್ಯ ನಿರಂತರವಾಗಿ ಮುಂದುವರೆಯುತ್ತಿದೆ.

ಪ್ರಭಂಜನಾಚಾರ್ಯರ ಮಹತ್ವದ ಸಾಂಸ್ಥಿಕ ಕೊಡುಗೆಗಳಲ್ಲಿ ಶ್ರೀ ಜಯತೀರ್ಥ ಹಸ್ತಲಿಪಿ ಗ್ರಂಥಾಲಯವು ಮಹತ್ವಪೂರ್ಣವೆನಿಸಿದ್ದು, ಆಚಾರ್ಯರ ಮತ್ತೊಂದು ಮಹತ್ವದ ಸಾಂಸ್ಥಿಕ ಕೊಡುಗೆಯೆಂದರೆ ಶ್ರೀ ವ್ಯಾಸ ಮಧ್ವ ಸಂಶೋಧನಾ ಪ್ರತಿಷ್ಠಾನ ಟ್ರಸ್ಟ್, ಈ ಮಹಾನ್ ಸಂಸ್ಥೆಯು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳ ಕುರಿತಾದ ಮಹತ್ವದ ಚಿಂತನೆಗಳು ನಿರಂತರವಾಗಿ ಕ್ರಿಯಾಶೀಲವಾಗಿದೆ. ಈ ಸಂಸ್ಥೆ ನೂರಾರು ಮಹತ್ವದ ಕೃತಿಗಳನ್ನು ತನ್ನ ಶ್ರದ್ಧಾವಂತ ಭಾರತೀಯ ಸಮುದಾಯಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದೆ. ಇವಷ್ಟೇ ಅಲ್ಲದೆ ಆಚಾರ್ಯರು ನಿವೃತ್ತ ಪಂಡಿತರು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಮಹತ್ವದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಸಾಂಸ್ಕೃತಿಕ ಕ್ಷೇತ್ರದಲ್ಲಿನ ಅಪಾರ ಕೊಡುಗೆಗಾಗಿ 2005ರ ವರ್ಷದಲ್ಲಿ ಅಂದಿನ ಪ್ರಸಿದ್ಧ ರಾಷ್ಟ್ರಪತಿ ಗಳಾಗಿದ್ದ ದಿವಂಗತ ಭಾರತರತ್ನ ಡಾ.ಅಬ್ದುಲ್ ಕಲಾಂ ಅವರಿಂದ ಸ್ವಾತಂತ್ರೋತ್ಸವ ಪ್ರಶಸ್ತಿ ಸ್ವೀಕರಿಸಿರುವ ಪ್ರಭಂಜನಾಚಾರ್ಯರಿಗೆ, 2002ರ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಪರ್ಯಾಯ ಪ್ರಶಸ್ತಿ ಮುಂತಾದ ಮಹಾನ್ ಗೌರವಗಳಲ್ಲದೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧ ಸಂಘ ಸಂಸ್ಥೆಗಳ ಪ್ರಶಸ್ತಿ ಗೌರವಗಳು ಸಂದಿವೆ. 1994ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಮಧ್ವ ತತ್ವಶಾಸ್ತ್ರ ಸಮ್ಮೇಳನದ ಅಧ್ಯಕ್ಷ ಸ್ಥಾನ ಪ್ರಭಂಜನಾಚಾರ್ಯರನ್ನು ಅರಸಿ ಬಂದಿತ್ತು.

ಪ್ರಭಂಜನಾಚಾರ್ಯರ ಅಸಂಖ್ಯಾತ ಉಪನ್ಯಾಸ, ಸಂಶೋಧನೆ ಮತ್ತು ಕೃತಿಗಳಲ್ಲಿ ಅಪರಿಮಿತ ಮಧ್ವತತ್ವ ವಿಚಾರಗಳ ಜೊತೆಗೆ, ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ ಮತ್ತು ವೇದೋಪನಿಷತ್ತುಗಳ ಸಾಗರದ ಮಹಾಪೂರವೇ ತುಂಬಿಕೊಂಡಿವೆ. ಈ ಎಲ್ಲ ಮಹತ್ವದ ತಿರುಳನ್ನೂ ಅಂದಿನ ಯುವಜನತೆಗೆ ಆಕರ್ಷಕವಾಗಿ ಉಣಬಡಿಸುತ್ತಿರುವ ಆಚಾರ್ಯರು ಸಾಮಾನ್ಯರಿಂದ ಪಂಡಿತೋತ್ತಮರವರೆವಿಗೆ ಎಂಬಂತೆ ಎಲ್ಲೆಡೆಯಲ್ಲಿ ತಮ್ಮ ಪಾಂಡಿತ್ಯವನ್ನು ಹದವಾಗಿ ಕೊಂಡೊಯ್ದಿದ್ದಾರೆ. ವೇದ ಪುರಾಣ ಕಾಲದ ವಿಚಾರಗಳು ಇಂದಿನ ದಿನಕ್ಕೆ ಹೇಗೆ ಪ್ರಸ್ತುತ ಎಂಬುದನ್ನು ಮನದಟ್ಟು ಮಾಡಿಕೊಡುತ್ತಿರುವಲ್ಲಿ ಆಚಾರ್ಯರ ಕೊಡುಗೆ ಅತ್ಯಂತ ಶ್ಲಾಘನೀಯವೆನಿಸಿದೆ.

ಶ್ರೀಯುತರ ಈ ಎಲ್ಲಾ ವಿದ್ವತ್ಪೂರ್ಣ ಕಾರ್ಯಗಳು ಇನ್ನಷ್ಟು ಸಮಾಜಮುಖಿಯಾಗಿ ನಡೆಯಲೆಂದು ಹಾರೈಸುತ್ತ ಶ್ರೀಗಂಧ ಅವರನ್ನು ಅಭಿನಂದಿಸುತ್ತಿದೆ.

Also read: ಅಕ್ರಮ ಕಸಾಯಿಖಾನೆ ಮೇಲೆ ದಾಳಿ: ಗೋಮಾಂಸ ಸಹಿತ ಐವರು ಬಂಧನ

ಪುಸ್ತಕದ ಲೇಖಕರ ಪರಿಚಯ:
ಕೆ. ಎಸ್. ಗುಂಡೂರಾವ್ ಮತ್ತು ಶಾರದಮ್ಮ ಇವರ ಪುತ್ರರಾದ ಕೆ. ಜೆ. ಕೃಷ್ಣಾನಂದ ಸ್ವಚ್ಛ ಮಲೆನಾಡಿನ ತೀರ್ಥಹಳ್ಳಿ ಹೊಸನಗರ ಮಧ್ಯದ ಊರಾದ ಕೋಗಿಲೆಯಲ್ಲಿ ಜನಿಸಿದರು.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿತ್ತೀಯ ಸಂಸ್ಥೆಯಲ್ಲಿ ಮೂವತ್ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ಆ ಬ್ಯಾಂಕು ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ವಿಲೀನವಾದ 2017ರ ಸಂದರ್ಭದಲ್ಲಿ ಸ್ವಯಂ ನಿವೃತ್ತಿ ಪಡೆದು ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ದಿ. ರಂಗಸ್ವಾಮಿ ಪ್ರಕಾಶಕರಾಗಿದ್ದ ಆಗಿನ ನಗರದ ಜನಪ್ರಿಯ ‘ನಾವಿಕ’ ದಿನಪತ್ರಿಕೆಯಲ್ಲಿ ಸಂಕಲನವಾಗುವಷ್ಟು ಇವರ ಕತೆಗಳು ‘ಮಲೆನಾಡಿನ ಕತೆಗಳು’ ಶಿರೋನಾಮೆಯಲ್ಲಿ ಪ್ರಕಟವಾಗಿವೆ. ಇವುಗಳಲ್ಲೆಲ್ಲ ಮಲೆನಾಡಿನ ದಟ್ಟ ಅನುಭವಗಳ ಕಥಾನಕಗಳಿವೆ.

ಸಾಹಿತ್ಯ, ಸಂಗೀತ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದ ಮೂಲಕ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿರುವ ಇವರು ಕೆ.ಎಸ್.ಈಶ್ವರಪ್ಪನವರ ಮಾರ್ಗದರ್ಶಿ ಸಂಘಟನೆಯಾದ ‘ಶ್ರೀಗಂಧ’ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲೊಬ್ಬರು.

‘ಕಲ್ಲಹಳ್ಳಿ ಕೆ.ಹೆಚ್.ಬಿ ಬಳಕೆದಾರರ ಸಂಘ’ “ಕಲ್ಲಹಳ್ಳಿ ಅಭೀಷವರದ ಶ್ರೀ ಮಹಾಗಣಪತಿ ಸೇವಾ ಪ್ರತಿಷ್ಠಾನ” ನಿವೃತ್ತ ಬ್ಯಾಂಕ್ ನೌಕರರ ಕ್ಷೇಮಾಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ “ಸಂಧ್ಯಾದೀಪ”ದಂತಹ ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರ ‘ಸಾಲುಮರದ ತಿಮ್ಮಕ್ಕ ಮತ್ತು ಪ್ರಶಸ್ತಿ’, ‘ಗಾಂಧಿ ಮತ್ತು ನಾನು’ ಮತ್ತು ಹಲವು ಕವನಗಳು ಹಾಗೂ ಹಲವು ಕತೆಗಳು ಬಹುಮಾನಕ್ಕೆ ಪಾತ್ರವಾಗಿವೆ.

ನಿವೃತ್ತಿ ನಂತರ ಶಿವಮೊಗ್ಗ ನಗರದ ‘ಅಜೇಯ’ ದಿನಪತ್ರಿಕೆಯಲ್ಲಿ ಇವರು ಪ್ರತಿ ಶನಿವಾರ ಬರೆಯುವ ಅಂಕಣ ”ವಾರದ ವಿದ್ಯಮಾನ” ಇವರಿಗೆ ಬಲು ಜನಪ್ರಿಯತೆ ತಂದುಕೊಟ್ಟಿದೆ.

ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ಸದಾ ಕಾರ್ಯಶೀಲರಾಗಿರುವ ಇವರು ಶಿವಮೊಗ್ಗ ನಗರದ ‘ಮಲೆನಾಡು ಮಿತ್ರ’ ಪತ್ರಿಕೆಗೆ ಪ್ರತಿ ಬುಧವಾರ ಬರೆದ ಅಂಕಣಗಳ ಪ್ರಥಮ ಪ್ರಕಟಿತ ಕೃತಿ ಸಕಾರಾತ್ಮಕ ಚಿಂತನೆಗಳ ಅಂಕಣ ಬರಹದ ಗುಚ್ಚ “ಒಳಸುಳಿಯೊಳಗಿಳಿದು” ಇದೀಗ ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎನ್. ಡಿ. ಸತೀಶ್, ಚೇತನ್, ವಿಶ್ವಾಸ್, ಸುಧೀಂದ್ರ ಕಟ್ಟೆ, ದಿನೇಶ್ ಆಚಾರ್ಯ, ಆದರ್ಶ ಮುಂತಾದವರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: K S EshwarappaKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga NewsShrigandhaಕೆ.ಎಸ್. ಈಶ್ವರಪ್ಪಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್ಶ್ರೀಗಂಧ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಕ್ರಮ ಕಸಾಯಿಖಾನೆ ಮೇಲೆ ದಾಳಿ: ಗೋಮಾಂಸ ಸಹಿತ ಐವರು ಬಂಧನ

Next Post

ಸಂಸ್ಕೃತಿಯ ಮೆರಗನ್ನು ಬೆಳೆಸಿದ ಜೀವನ ಧರ್ಮ ಬೋಧಿಸಿದ್ದು ಜೈನ ಧರ್ಮ: ಸಂಸದ ಬಿ.ವೈ. ರಾಘವೇಂದ್ರ

kalpa News

kalpa News

Next Post
ಸಂಸ್ಕೃತಿಯ ಮೆರಗನ್ನು ಬೆಳೆಸಿದ ಜೀವನ ಧರ್ಮ ಬೋಧಿಸಿದ್ದು ಜೈನ ಧರ್ಮ: ಸಂಸದ ಬಿ.ವೈ. ರಾಘವೇಂದ್ರ

ಸಂಸ್ಕೃತಿಯ ಮೆರಗನ್ನು ಬೆಳೆಸಿದ ಜೀವನ ಧರ್ಮ ಬೋಧಿಸಿದ್ದು ಜೈನ ಧರ್ಮ: ಸಂಸದ ಬಿ.ವೈ. ರಾಘವೇಂದ್ರ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL