ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೈಕಲ್ ಬಳಕೆಯಿಂದ ದೇಹ, ಮನಸ್ಸು ಸದೃಢವಾಗುವುದರ ಜೊತೆಗೆ ಹಲವು ಕಾಯಿಲೆಗಳಿಂದ ದೂರ ಇರುತ್ತೇವೆ ಎಂದು ಮಹಾನಗರಪಾಲಿಕೆ ಮಹಾಪೌರರಾದ ಸುನಿತಾ ಅಣ್ಣಪ್ಪ ನುಡಿದರು.
ಅವರು ಇಂದು ಶಿವಮೊಗ್ಗ ಸ್ಮಾರ್ಟ್ ಸಿಟಿಯವತಿಯಿಂದ ಆಯೋಜಿಸದ ವಿಶ್ವ ಬೈಸಿಕಲ್ ದಿನಾಚಾರಣಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ಸೈಕಲ್ ಬಳಸುವುದರಿಂದ ಇಂದನ ಉಳಿತಾಯ ಮತ್ತು ಪರಿಸರ ಮಾಲಿನ ತಡೆಗಟ್ಟಬಹುದು ಹಾಗೂ ಸೈಕಲ್ ಬಳಕೆಯಿಂದ ನೂರಾರು ಉಪಯೋಗವಿದೆ ಆದ್ದರಿಂದ ಪ್ರತಿಯೊಬ್ಬರು ಸಣ್ಣ ಕೆಲಸಗಳಿಗೆ ನಿತ್ಯ ಸೈಕಲ್ ಬಳಸಬೇಕು ಎಂದರು.
Also read: ಶ್ರೀ ಧನ್ವಂತರಿ ಪ್ರತಿಷ್ಠಾಪನಾ ಉತ್ಸವ: ಮೈಸೂರು ಉತ್ತರಾದಿಮಠದಲ್ಲಿ ಸಪ್ತ ರಾತ್ರೋತ್ಸವ
ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಬೈಸಿಕಲ್ ಬಳಕೆಯಿಂದಾಗುವ ಉಪಯೋಗಗಳು, ಪರಿಸರ ಮಾಲಿನ್ಯ ತಡೆ, ಇಂಧನ ಉಳಿತಾಯ ಇತ್ಯಾದಿ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸ್ಮಾರ್ಟ್ಸಿಟಿ ವತಿಯಿಂದ ಇಂದು ಬೆಳಿಗ್ಗೆ 7 ಗಂಟೆಗೆ ನಗರದ ಗೋಪಾಳ ಪೊಲೀಸ್ ಚೌಕಿಯಿಂದ ಪ್ರಾರಂಭಿಸಿ ಡಿವಿಜಿ ಸರ್ಕಲ್, ಪ್ರೊ.ಕೃಷ್ಣಪ್ಪ ಸರ್ಕಲ್, ಐಜಿ ಸರ್ಕಲ್, ವಿನೋಬನಗರ ಪೊಲೀಸ್ ಚೌಕಿ ಮಾರ್ಗವಾಗಿ ಫ್ರೀಡಂ ಪಾರ್ಕ್ವರೆಗೆ ಸೈಕಲ್ ಜಾಥಾ ನಡೆಯಿತು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷ ಎಸ್. ದತ್ತಾತ್ರಿಯವರು ಸೈಕಲ್ ಬಳಸುವುದರಿಂದ ನಮ್ಮ ದೇಹದಲ್ಲಿ ರಕ್ತಸಂಚಾರ ಸರಾಗವಾಗಿ ಹರಿಯುವುದರಿಂದ ನಮ್ಮ ಆಯಶ್ಯವೃದ್ಧಿಯಾಗುವುದರ ಜೊತೆಗೆ ಸದಲವಲವಿಕೆಯಿಂದ ಇರುತ್ತೇವೆ.
ಪ್ರತಿ ವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನಾಚರಣೆಯನ್ನು ಪ್ರಪಂಚದಾದ್ಯಂ ಆಚರಿಸಲಾಗುತ್ತಿದೆ. ಅದರಂತೆ ಭಾರತ ಸರ್ಕಾರದ ವಸತಿ ಮತ್ತು ನಗರ ಯೋಜನೆಗಳ ಮಂತ್ರಾಲಯವು ಇದರಡಿ ಬರುವ ಸ್ಮಾರ್ಟ್ಸಿಟಿ ಮಿಷನ್ ಮೂಲಕ ದೇಶದ 100 ಸ್ಮಾರ್ಟ್‌ಸಿಟಿಗಳಲ್ಲಿ ಜೂನ್ 3ರಂದು ಬೈಸಿಕಲ್ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಇಂದು ನಗರದಲ್ಲಿ ಸೈಕಲ್ ರ‍್ಯಾಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಟಿ. ವಿ ಮಂಜುನಾಥ್, ವಿಶ್ವಾಸ್, ಅನಿತಾ ರವಿಶಂಕರ್, ಶಿವಮೊಗ್ಗ ಸೈಕಲ್ ಕ್ಲಬ್‌ನ ಅಧ್ಯಕ್ಷ ಶ್ರೀಕಾಂತ್, ವಿಜಯ್ ಕುಮಾರ್, ಸ್ಮಾರ್ಟ್ ಸಿಟಿ ಕಮಿಷನರ್ ಚಿದಾನಂದ್ ವಠಾರೆ, ಸೈಕಲೋತ್ಸವ ಶಾಪ್‌ನ ಮಾಲೀಕರಾದ ಶ್ರೀ ನರಸಿಂಹ ಮೂರ್ತಿ, ಡಾ ಪರಿಸರ ನಾಗರಾಜ್, ಸೈಕಲ್ ಕ್ಲಬ್‌ನ ಕಾರ್ಯದರ್ಶಿ ಗಿರೀಶ್ ಕಾಮತ್, ಡಾ. ಶೇಖರ್ ಗೌಳೇರ್, ಹಾಗೂ ಮಹಾನಗರಪಾಲಿಕೆ ಸದಸ್ಯರು ಅನಿತಾ ರವಿಶಂಕರ್, ಯೂತ್ ಹಾಸ್ಟೆಲ್‌ನ ಕಾರ್ಯದರ್ಶೀ ಸುರೇಶ್ ಕುಮಾರ್, ಮಹಾನಗರಪಾಲಿಕೆಯ ವಿಶ್ವಾಸ್, ಸೈಕಲ್ ಕ್ಲಬ್‌ನ ಸದಸ್ಯರು, ಸ್ಮಾಟ್ ಸಿಟಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post