ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶರಣರು ಸಮ ಸಮಾಜದ ಚಿಂತಕರು. ನಮ್ಮ ನಡೆ ನುಡಿಯ ಜೀವನ ಸಿದ್ಧಾಂತವನ್ನು ರೂಪಿಸಿದ ಮಹನೀಯರು. ಲಿಂಗ ಭೇದವನ್ನು, ಜಾತಿ ಭೇದವನ್ನು ವಿರೋಧಿಸುವ ದನಿಯೊಂದು 12ನೇ ಶತಮಾನದಲ್ಲಿ ಮೂಡಿ ಬಂತು. ಅದು ಇಂದಿಗೂ ನಮ್ಮ ಸಾಮಾಜಿಕ ಬದುಕಿನಲ್ಲಿ ಬೆಸೆದುಕೊಂದಿದೆ ಎಂದು ಸಹ್ಯಾದ್ರಿ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ. ಕೆ. ವೀಣಾ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜು ಕನ್ನಡ ವಿಭಾಗ ಮತ್ತು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಲಾಗಿದ್ದ 27ನೇ ವಚನ ಮಂಟಪ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕುವೆಂಪು ಅವರ ವಿಶ್ವ ಮಾನವ ಸಂದೇಶಕ್ಕೆ ವಚನಕಾರರ ಜೀವನ ಆದರ್ಶವೆ ಸ್ಫೂರ್ತಿ. ಮನುಷ್ಯ ಬದುಕಿನ ಘನತೆಯನ್ನು ದುಡಿಮೆಯ ಮೌಲ್ಯವನ್ನು ಶರಣರು ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪ್ರಕಾಶ್ ಎಂ. ಬಾರಂದೂರು ಅವರು ಬಸವಣ್ಣನವರು ಕಟ್ಟಿದ ಸಮಾಜ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿ, ಇಂದಿನ ಸಮಾಜದಲ್ಲಿ ಸಂಬಂಧಗಳು ಕಮರ್ಷಿಯಲ್ ಆಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬಸವಾದಿ ಶಿವಶರಣರು ನೀಡಿದ ಸಂದೇಶವನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಆಧುನಿಕ ಬಂಡುವಾಳಶಾಹಿ ಜಗತ್ತಿನ ಸ್ವಾರ್ಥ ದುರಾಸೆಗಳಿಂದ ನಮ್ಮ ಬದುಕು ಕಲುಷಿತಗೊಂಡಿದೆ ಎಂದರು.
ದಯೆ ಕ್ಷಮೆ ಇಂದಿನ ಜಗತ್ತಿಗೆ ಅಗತ್ಯವಾಗಿದೆ. ಅದನ್ನೇ ಬಸವಣ್ಣನವರು, ಸಕಲ ಜೀವಿಗಳ ಮೇಲೆ ದಯಾ ಭಾವ ತೋರುವುದೇ ಧರ್ಮ. ಹಿಂಸೆ, ದ್ವೇಷಗಳಿಂದ ಬಿಡುಗಡೆ ಪಡೆದು ಪ್ರೀತಿ ದಯೆ ಮೊದಲಾದ ಮಾನವೀಯ ಗುಣಗಳನ್ನು ಹರಡಿದಾಗಲೇ ಅರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ” ಎಂದರು. ವಿದ್ಯಾರ್ಥಿಗಳಾದ ಸುಚಿತ್ ಶಾಸ್ತ್ರಿ, ಮಹೇಂದ್ರ ಶೆಟ್ಟಿ,ಜೀವನ್ ಎನ್.,ವೀರೇಶ್ ಟಿ. ಎಸ್ ಹಾಗೂ ಸುಶ್ಮಿತಾ ಬಿ. ಎನ್ ಇವರು ವಚನಗಳನ್ನು ಗಾಯನ ಮಾಡಿದರೆ ಕುಮಾರಿ ನಿರೀಕ್ಷಾ ಬಿ. ಎಸ್., ಸೃಷ್ಟಿ ಎಸ್, ಕಸ್ತೂರಿ ಎಂ,ಸ್ನೇಹ, ವರ್ಷಿಣಿ ಎಚ್. ಸಿ ಇವರಿಂದ ಇವರಿಂದ ವಚನ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಮಹಾರುದ್ರ ಎಚ್. ಎನ್. ಕಾರ್ಯಕ್ರಮದ ಉದ್ದೇಶ ಮಹತ್ವವನ್ನು ವಿವರಿಸಿದರು.
Also read: ಗಮನಿಸಿ! ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ಹಿನ್ನೆಲೆ ಶಿವಮೊಗ್ಗ-ಭದ್ರಾವತಿ ಸಂಚಾರ ಮಾರ್ಗ ಬದಲಾವಣೆ
ದತ್ತಿದಾನಿಗಳಾದ ಪ್ರೊ. ಎ. ಎಸ್. ಚಂದ್ರಶೇಖರ್, ಭಾರತಿ ಚಂದ್ರಶೇಖರ್, ಆರ್. ಎಸ್. ಸ್ವಾಮಿ., ರೋಟರಿ ವಿಜಯ ಕುಮಾರ್, ಉಪಕುಲಸಚಿವ ಎಂ. ಚಂದ್ರಕಾಂತ್, ಎಚ್. ಡಾ. ದೊಡ್ಡ ನಾಯ್ಕ್, ಕುಮಾರಸ್ವಾಮಿ, ಅಶ್ವಿನಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶುಭಾ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ಎಚ್. ಪಿ. ದಿವ್ಯಾ ಹಾಗೂ ಎಂ.ಐ. ಸಿದ್ದಾರೂಢ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post