ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋವಿಡ್ ಸಂಕಷ್ಟ ಕಾಲದಲ್ಲಿ ತಮ್ಮ ಜೀವದ ಹಂಗನ್ನೇ ತೊರೆದು ಕರ್ತವ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರ ಸೇವೆ ಸರ್ವಥಾ ಮನನೀಯ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಶ್ಲಾಘಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ, ಚೈತನ್ಯ ರೂರಲ್ ಡೆವಲಪಮೆಂಟ್ ಸೊಸೈಟಿ, ಶಿವಮೊಗ್ಗ ಹಾಗೂ ಸರ್ಜಿ ಫೌಂಡೇಷನ್, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ನಡೆದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸರ್ಜಿ ಆಸ್ಪತ್ರೆಯ ಆರೋಗ್ಯ ಕಾರ್ಡ್’ಗಳನ್ನು ವಿತರಿಸಿ ಅವರು ಮಾತನಾಡಿದರು.
ಆಶಾ ಕಾರ್ಯಕರ್ತೆಯರಿಗೆ ಅಭಿಮಾನದ ಅಭಿನಂದನೆಯ ಜೊತೆಗೆ ಅವರ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಆರೋಗ್ಯ ಕಾರ್ಯಕರ್ತೆಯರಿಗೆ ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಧೈರ್ಯವನ್ನು ತುಂಬಿದ್ದಾರೆ. ಅವರ ಆರೋಗ್ಯವನ್ನು ಕಾಪಾಡಲು ಹಗಲಿರುಳೆನ್ನದೇ ತಮ್ಮ ಜೀವದ ಹಂಗನ್ನೇ ತೊರೆದು ಕರ್ತವ್ಯವನ್ನು ನಿರ್ವಹಿಸಿದ ಶಿವಮೊಗ್ಗ ಜಿಲ್ಲಾ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಯಾವುದೇ ಸನ್ಮಾನ ಬಿರುದುಗಳಿಗೆ ಆಸೆ ಪಡೆದೇ ನಿಸ್ವಾರ್ಥ ಸೇವೆಯಿಂದ ಮನೆಯ ಕುಟುಂಬದವರ ಕಟುಮಾತುಗಳನ್ನು ಲೆಕ್ಕಿಸದೇ ಸಿಕ್ಕಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಿ ಮಹಾಮಾರಿ ಕೊರೋನಾವನ್ನು ಹೊಡೆದೊಡಿಸಲು ಶ್ರಮಿಸಿದ ಅಶಾವಾದದ ಆಶಾ ಕಾರ್ಯಕರ್ತೆಯರಿಗೆ ಈ ಆಭಿನಂದನೆ ಅರ್ಥಪೂರ್ಣವಾದುದು. ತಮ್ಮ ನಿಸ್ವಾರ್ಥ ಸೇವೆಯ ಬಗ್ಗೆ ಸಂಸತ್ ಸಭೆಯಲ್ಲಿ ಚರ್ಚಿಸಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಚರ್ಚಿಸಿ, ತಮಗೆ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
Also read: ಬಾವೈಕ್ಯತಾ ಜಾಥಾಗಳು ಸಮಾಜದಲ್ಲಿನ ಭೇದ-ಭಾವ ತೊಲಗಿಸಲು ಸಹಕಾರಿ: ಡಾ. ವಿಕ್ರಂ ಅಮಟೆ
ಮೆಗ್ಗಾನ್ ಆಸ್ಪತ್ರೆಯಲ್ಲಿ ವಿದ್ಯುತ್ ಅವಘಡದಿಂದಾಗಿ ದೊಡ್ಡ ಪ್ರಮಾಣ ಸೃಷ್ಠಿಯಾಗಿತ್ತು. ಆ ತುರ್ತು ಸಂದರ್ಭದಲ್ಲಿ ಡಾ.ಧನಂಜಯ ಸರ್ಜಿ ಅವರ ವಿಶೇಷ ಹಾಗೂ ಶೀಘ್ರ ಪ್ರಯತ್ನದ ಫಲವಾಗಿ ಶಿವಮೊಗ್ಗದಲ್ಲಿ ದೊಡ್ಡ ಅನಾಹುತ ತಪ್ಪಿತು. ಅಂದು ಸರ್ಜಿ ಆಸ್ಪತ್ರೆಯ ಸಹಕಾರವನ್ನು ನಗರ ಎಂದಿಗೂ ಮರೆಯುವಂತಿಲ್ಲ.
-ಬಿ.ವೈ. ರಾಘವೇಂದ್ರ, ಸಂಸದ
ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ವಿತರಿಸಿ ಮಾತನಾಡಿದ ಎಂಎಲ್’ಸಿ ಎಸ್. ರುದ್ರೇಗೌಡ, ಆಶಾ ಕಾರ್ಯಕರ್ತೆಯರು ಮತ್ತು ಅವರ ಕುಟುಂಬದವರ ಆರೋಗ್ಯಕ್ಕಾಗಿ ಅವಶ್ಯವಿರುವ ಪ್ರಾಥಮಿಕ ಆರೋಗ್ಯ ಪರೀಕ್ಷಾ ಸಾಮಾಗ್ರಿಗಳು ಹಾಗೂ ಆರೋಗ್ಯ ರಕ್ಷಣಾ ಸಾಮಾಗಿಗಳನ್ನು ಒಳಗೊಂಡ ಒಂದು ಉತ್ತಮವಾದ ಕಿಟ್ಟನ್ನು ಕೊಡುತ್ತಿರುವ ಚೈತನ್ಯ ಫೌಂಡೇಷನ್’ನವರ ಕಾರ್ಯವನ್ನು ಮುಕ್ತಕಂಠದಿಂದ ಕೊಂಡಾಡಿದರು. ಬಹಳ ಉಪಯುಕ್ತವಾದದ್ದು ಹಾಗೂ ಇದೊಂದು ಸಾಮಾಜಿಕ ಕಳಕಳಿಯ ಉತ್ತಮ ವಿಚಾರ. ಸರ್ಜಿ ಫೌಂಡೇಷನ್ ಮುಂದಾಲೋಚನೆಯ ವಿಚಾರ ಅಭಿನಂದನೀಯ ಎಂದರು.
ಎಂಎಲ್’ಸಿ ಆಯನೂರು ಮಂಜುನಾಥ್ ಮಾತನಾಡಿ, ಇಂತಹ ಒಂದು ಅಭಿನಂದನಾ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾದುದು. ಎಲ್ಲಾ ವೈಯಕ್ತಿಕ ಸಮಸ್ಯೆಗಳನ್ನು ಬದಿಗಿಟ್ಟು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲೆ ಮರೆಯ ಕಾಯಿಯಂತೆ ಸದಾ ಶ್ರಮಿಸುತ್ತಿರುವ ನಮ್ಮ ಎಲ್ಲಾ ಆಶಾ ಕಾರ್ಯಕರ್ತ ಸಹೋದರಿಯರಿಗೆ ಅಭಿನಂದಿಸುತ್ತಿರುವುದು ನನಗೆ ತುಂಬಾ ಸಂತೋಷ ಹಾಗೂ ಹೆಮ್ಮೆಯ ಸಂಗತಿ ಎಂದರು.
ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೂ, ಪೌರಕಾರ್ಮಿಕರಿಗೂ ಸಹ ಇಂತಹ ಅಭಿನಂದನಾ ಸಮಾರಂಭಗಳು ಹಾಗೂ ಸಹಾಯದ ಅವಶ್ಯಕತೆಯಿದೆ ಎಂದರು.
ಅಪಾರ ಸಂಖ್ಯೆಯಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು, ಚೈತನ್ಯ ರೂರಲ್ ಡೆವಲೆಪ್ಮೆಂಟ್ ಸೊಸೈಟಿ ನಿರ್ದೇಶಕರು ಡಾ.ಎಲ್.ಕೆ. ಶ್ರೀಪತಿ, ಬೆಂಗಳೂರು ಧ್ವನಿ ಫೌಂಡೇಷನ್ ನ ಸೈಯದ್ ಸಿದ್ದಿಕಿ, ಸರ್ಜಿ ಫೌಂಡೇಷನ್ ವೈದ್ಯಕೀಯ ನಿರ್ದೇಶಕರು ಡಾ. ಧನಂಜಯ ಸರ್ಜಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ದಕ್ಷಿಣ ಪ್ರಾಂತದ ಕಾರ್ಯನಿರ್ವಾಹಕರು, ಪಟ್ಟಾಭಿರಾಮ್, ಶಿವಮೊಗ್ಗ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಚೈತನ್ಯ ರೂರಲ್ ಡೆವಲೆಪ್ಮೆಂಟ್ ಸೊಸೈಟಿ ಹಾಗೂ ಸರ್ಜಿ ಫೌಂಡೇಷನ್ ಎಲ್ಲಾ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದರು.
ಡಾ. ಧನಂಜಯ ಸರ್ಜಿಯವರು ಅತಿಥಿಗಳನ್ನು ಸ್ವಾಗತಿಸಿ, ಚೈತನ್ಯ ಸಂಸ್ಥೆಯ ಸಿಇಓ ಬಿ.ಟಿ. ಭದ್ರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಪುರುಷೋತ್ತಮ್ ಕೆ.ಆರ್. ನಿರೂಪಿಸಿ, ಮೇಘನಾ ವಂದನಾರ್ಪಣೆ ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post