ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಹಲವು ಅವ್ಯವಸ್ಥೆಯ ಕುರಿತಾಗಿ ಕಾಮನ್ ಮ್ಯಾನ್ ಸಂಸ್ಥೆ ಆನ್’ಲೈನ್ ಮೂಲಕ ಪ್ರಧಾನಮಂತ್ರಿಯವರಿಗೆ ದೂರು ಸಲ್ಲಿಕೆ ಮಾಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಂಸ್ಥೆಯ ಪ್ರಮುಖರು, “ಆರೋಗ್ಯವೇ ಭಾಗ್ಯ” ಆದರೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯೇ ಭಾಗ್ಯವಾಗಿದೆ. ದಿನಕ್ಕೆ ಸಾವಿರಾರು ಜನ ಚಿಕಿತ್ಸೆಗಾಗಿ ಅಕ್ಕಪಕ್ಕದ ಜಿಲ್ಲೆಗಳಿಂದ ಆಸ್ಪತ್ರೆಗೆ ಬರುತ್ತಾರೆ. ಅಪ್ಪ ಅಜ್ಜನ ತಲೆಮಾರುಗಳಿಂದಲೂ ಒಳ್ಳೆಯ ಚಿಕಿತ್ಸೆಗೆ ಈ ಆಸ್ಪತ್ರೆ ಹೆಸರುವಾಸಿ. ಯಾರೇ ಆಗಲಿ ಆಸ್ಪತ್ರೆಗೆ ಭೇಟಿ ನೀಡಿದರೆ ಸ್ನೇಹಿತರು ಅಥವಾ ಸಂಬಂಧಿಗಳು ಒಬ್ಬರಾದರೂ ಚಿಕಿತ್ಸೆಗೆ ಬಂದಿರುವುದು ಕಾಣಬಹುದು ಎಂದಿದ್ದಾರೆ.
ರೋಗಿಗಳ ಮೇಲೆ ನಡೆಯುವ ಮೊದಲ ದೌರ್ಜನ್ಯ ಪಾಕಿರ್ಂಗ್ ಶುಲ್ಕ ವಸೂಲಿ. ಪಾಕಿರ್ಂಗ್ ಅವೈಜ್ಞಾನಿಕವಾಗಿದ್ದು, ವಾಹನಗಳಿಗೆ ನೆರಳಿನ ವ್ಯವಸ್ಥೆಯಿಲ್ಲ, ಸುರಕ್ಷತಾ ದೃಷ್ಟಿಯಿಂದ ಬೆಂಕಿ ಅವಗಡ ಸಂಭವಿಸಿದರೆ ಬೆಂಕಿ ನಂದಿಸಲು ಯಾವ ಸಲಕರಣೆಯು ಇಲ್ಲ. (ಆಸ್ಪತ್ರೆ ಎದುರಿಗೆ ಫೈರ್ ಆಫೀಸ್ ಇದ್ದು ಅವರು ಸಹ ಬರುವುದರೊಳಗೆ ಸಾಕಷ್ಟು ಅನಾಹುತವಾಗಿರುತ್ತದೆ), ಭದ್ರತೆಯ ದೃಷ್ಟಿಯಲ್ಲಿ ಸಿಸಿ ಕ್ಯಾಮೆರಾ ಇಲ್ಲವೇ ಇಲ್ಲ, ಇನ್ನು ಯಾವ ಪುರುಷಾರ್ಥಕ್ಕೆ ಈ ಪಾಕಿರ್ಂಗ್ ಶುಲ್ಕ ವಸೂಲಾತಿ ಮಾಡುತ್ತಾರೆ ಎಂದು ದೂರಿದ್ದಾರೆ.
ಇಲ್ಲಿ ಕೆಲಸ ಮಾಡುವ ಸೆಕ್ಯೂರಿಟಿ ಅವರಿಗೆ ಯಾವುದೇ ತರಹದ ತರಬೇತಿ ಇಲ್ಲ. ನೊಂದು-ಬೆಂದು ಬಂದಿರುವ ರೋಗಿಗಳ ಜೊತೆ ಅವರ ಸಂಬಂಧಿ ಸ್ನೇಹಿತರ ಜೊತೆ ಯಾವ ರೀತಿ ವರ್ತನೆ ಮಾಡಬೇಕು ಎಂಬ ಕಲ್ಪನೆಯೂ ಇಲ್ಲ ಎಂದಿದ್ದಾರೆ.
ರೋಗಿಗಳು ಮಲಗುವ ಲಕ್ಷಾಂತರ ಮೌಲ್ಯದ ಮಂಚ ಸಂಪೂರ್ಣವಾಗಿ ಹಾಳಾಗಲು ಕಾರಣವಾಗಿದೆ. ಆಡಳಿತ ಮಂಡಳಿ ಕಣ್ಣು ಮುಚ್ಚಿ ಕುಳಿತಿರುವುದೇಕೆ ಇದು ಒಂದು ದೊಡ್ಡ ಉದಾಹರಣೆಯಾಗಿದೆ ಎಂದಿದ್ದಾರೆ ಸಂಸ್ಥೆಯ ನವೀನ್ ತಲಾರಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post