ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಕೊಡಗಿನ ಶಾಲೆಯಲ್ಲಿ ಶಿಬಿರಾರ್ಥಿಗಳಿಗೆ ತ್ರಿಶೂಲ ಹಾಗೂ ಏರ್ ಗನ್ ತರಬೇತಿ ನೀಡಲಾಗಿದ್ದು, ಇದರಲ್ಲಿ ಯಾವುದೇ ರೀತಿಯಲ್ಲೂ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಸಮರ್ಥನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ತರಬೇತಿ ನಡೆದ ಸ್ಥಳದಲ್ಲಿ ಶಾಲೆ ರಜೆಯಿದ್ದ ಕಾರಣ ತರಗತಿ ನಡೆಯುತ್ತಿರಲಿಲ್ಲ. ಅಲ್ಲದೇ, ಅಲ್ಲಿ ಯಾವುದೇ ರೀತಿಯ ಗುಂಡು ಹೊಂದಿರುವ ಆಯುಧ ಕೊಟ್ಟಿಲ್ಲ. ಏರ್ ಗನ್ ತರಬೇತಿಯನ್ನಷ್ಟೇ ನೀಡಲಾಗಿದೆ. ಅಲ್ಲದೇ, ಕಾನೂನನ್ನೂ ಸಹ ಉಲ್ಲಂಘಿಸಿಲ್ಲ ಎಂದರು.
ಶತಮಾನಗಳಿಂದ ನಮ್ಮ ದೇವಾಲಯಗಳನ್ನು ಧ್ವಂಸ ಮಾಡಲಾಗಿದ್ದು, ನಮ್ಮ ಬಹಳಷ್ಟು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಗಿದೆ. ದಬ್ಬಾಳಿಗೆ ಇಂದಿಗೂ ಮುಂದುವರೆದಿದೆ. ಹೀಗಾಗಿ, ನಮ್ಮ ರಕ್ಷಣೆಗಾಗಿ ತರಬೇತಿ ನೀಡಲಾಗಿದೆ ಎಂದರು.
ಈ ಕುರಿತಂತೆ ಬಿಜೆಪಿ ಶಾಸಕರು ಹಾಗೂ ಮುಖಂಡರ ವಿರುದ್ಧ ಪಿಎಫ್’ಐ ದೂರು ನೀಡಿದೆ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಸುಖಾಸುಮ್ಮನೆ ದೂರು ನೀಡಿದ್ದಾರೆ ಎಂದು ಕಿಡಿ ಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post