ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವಜನತೆ ಸದೃಢ ಮನಸ್ಸನ್ನು ಹೊಂದಬೇಕು, ಸಮಾಜಮುಖಿಯಾಗಿರಬೇಕು. ಡಾ. ನಾಗರಾಜ್ ಪರಿಸರ ಅವರ ಎನ್‌ಎಸ್‌ಎಸ್ ಕಾರ್ಯಕ್ರಮಗಳು ಯುವಜನತೆಗೆ ಸ್ಪೂರ್ತಿಯಾಗಿದೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜು ವಿಭಾಗದ ಅಧ್ಯಕ್ಷ ಡಾ. ವೆಂಕಟೇಶ್ ಹೇಳಿದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಭದ್ರಾ ತಂಡದವರು ಆಯೋಜಿಸಿದ್ದ ಎನ್‌ಎನ್‌ಎಸ್ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿ. ವಿಜಯ್‌ಕುಮಾರ್ ಶಿಬಿರದ ಧ್ವಜಾರೋಹಣ ನೆರವೇರಿಸಿ, ಓಜೋನ್ ಪದರದ ಮಹತ್ವದ ಬಗ್ಗೆ ಚಿತ್ರ ವಿಶ್ಲೇಷಣೆ ಮಾಡಿದರು.
ಕುವೆಂಪು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಅವರು, ಜೀವ ವೈವಿಧ್ಯತೆಯ ಮಹತ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಹಾಗೂ ಜೀವ ವೈವಿಧ್ಯತೆಯ ವಿನಾಶ, ಪರಿಸರ ಮಾಲಿನ್ಯ ಹಾಗು ಅದರ ಸಂರಕ್ಷಣೆ ಕುರಿತು ಸಾಕ್ಷ್ಯಚಿತ್ರ, ವಿವಿಧ ದೈನಂದಿನ ಉದಾಹರಣೆಗಳೊಂದಿಗೆ ವಿಭಿನ್ನ ರೀತಿಯಲ್ಲಿ ತಮ್ಮ ವಿಷಯ ಮಂಡಿಸಿದರು.
Also read: ಯುಪಿಎಸ್‌ಸಿ ನಾಗರೀಕ ಸೇವಾ ಫಲಿತಾಂಶ ಪ್ರಕಟ: ಶೃತಿ ಶರ್ಮಾ ಟಾಪರ್
ಶಿಬಿರದಲ್ಲಿ ಎಂ. ಎಸ್. ಜಯಂತ್ ಬಾಬು ಶಿವಮೊಗ್ಗ ಸುತ್ತಮುತ್ತಲಿನ ಸ್ಥಳಗಳ ಹಾವಿನ ವೈವಿಧತೆ ಕುರಿತು ಉಪನ್ಯಾಸ ನೀಡಿದರು. ಆಂದ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದ ಸ್ವಯಂ ಸೇವಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post