ಬೆಂಗಳೂರು, ಅ.3: ಮಠ ಮಾನ್ಯಗಳ ಮೇಲೆ ಸರ್ಕಾರದ ತೆಕ್ಕೆಗೆ ತೆಗೆದುಕೊಂಡು ಹಿಂದುತ್ವದ ನಾಶಕ್ಕೆ ಮುಂದಾಗಿರುವ ಕ್ರಮವನ್ನು ಖಂಡಿಸಿ, ಹೊಸನಗರ ರಾಮಚಂದ್ರಾಪುರ ಮಠದ ಅಡಿಯಲ್ಲಿ ಇದೇ ಅಕ್ಟೋಬರ್ 8ರಂದು ಕರ್ನಾಟಕ ಹಿಂದೂ ಸೇನೆ ಹೋರಾಟ ಆರಂಭಿಸಲು ನಿರ್ಧರಿಸಿದೆ.
ಈ ಕುರಿತಂತೆ ಹೇಳಿಕೆ ನೀಡಿರುವ ಸೇನೆ, ಹಿಂದುತ್ವದ ಉಳಿವು ಮಠ ಮಾನ್ಯಗಳ ಉಳಿವು. ಹಿಂದುತ್ವದ ಭದ್ರ ಬುನಾದಿಗಳು ಮಠಮಾನ್ಯಗಳು, ಇದೀಗ ಸರ್ಕಾರ ಮಠಗಳನ್ನ ತನ್ನ ತೆಕ್ಕೆಗೆ ತೆಗೆದುಕೊಂಡು ಹಿಂದುತ್ವ ಕೇಂದ್ರಗಳ ನಾಶಕ್ಕೆ ಮುಂದಾಗಿದೆ. ಇದನ್ನು ನಾವು ಹಿಂದೂಗಳು ಎಲ್ಲಾ ಸೇರಿ ಐಕ್ಯತೆ ಭಾವದಿ ಒಂದೆಡೆ ಸೇರಿ ದನಿ ಏತ್ತಲೇ ಬೇಕು. ಸಾಕಿನ್ನು ನಮ್ಮನ್ನು ಎಷ್ಟು ಎಂದು ಶೋಚನೆಗೆ ಒಳಪಡಿಸ್ತಾರೆ ಈ ದುಷ್ಟ ರಾಜಕಾರಣಿಗಳು. ಒಂದಾಗೋಣ, ಸಂತರ ನೇತೃತ್ವದಲ್ಲಿ ಹಿಂದುತ್ವದ ಉಳಿವಿಗೆ ಪ್ರಯತ್ನ ಮಾಡೋಣ, ಎಳಿ ಎದ್ದೇಳಿ ಐಕ್ಯತೆ ಘಂಟೆ ಭಾರಿಸಿ, ಕೇಸರಿ ಧ್ವಜವ ಆಗಸದೆತ್ತರಕ್ಕೆ ಏರಿಸಿ, ಎಚ್ಚರಿಕೆ ಘಂಟೆಯ ಜಗದಿ ಮೊಳಗಿಸಿ ಎಂದು ಕರೆ ನೀಡಿದೆ.
ವಿಶ್ವಕ್ಕೆ ಗೋಜಾಗೃತಿ ಮೂಡಿಸಿದ ಪುಣ್ಯ ಭೂಮಿ, ರಾಮಸತ್ರ ನಡೇದ ವಿಶೇಷ ಕರ್ಮ ಭೂಮಿ, ದೇಶಿ ಗೋಸಂರಕ್ಷಣೆಯ ಕೇಂದ್ರ ಭೂಮಿ, ಚಂದ್ರಮೌಳಿಶ್ವರನ ವಾಸ ಭೂಮಿ, ಅಚವಿಚ್ಛಿನ್ನ ಗುರು ಪರಂಪರಾಗತ ಭೂಮಿ
ಶ್ರೀರಾಮಚಂದ್ರಾಪುರಮಠದಲ್ಲಿ ಇದು ಆರಂಭಗೊಳ್ಳಲಿದೆ.
ಸರ್ಕಾರದ ಹಿಂದುತ್ವದ ನಾಶಕ್ಕೆ ಮೊದಲ ಗುರಿಯಾಗುತ್ತಿದೆ. ಹಾಗಾಗಿ ಇಲ್ಲಿಂದಲೇ ಇನ್ನೊಂದು ಐತಿಹಾಸಿಕ ಸಂಘಟನೆ ನಡೆಯಲಿ. ಆದುದರಿಂದ ಧರ್ಮಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾವೂ ಕೈಜೋಡಿಸಬೇಕು ಕರ್ನಾಟಕ ಹಿಂದೂ ಸೇನೆ ರಾಜ್ಯ ಸಮಿತಿ ಹಿಂದೂ ಬಾಂಧವರಲ್ಲಿ ಕೋರಿದೆ.
Discussion about this post