ನವದೆಹಲಿ: ಸೆ:30: ಪಾಕಿಸ್ತಾನದ ವಿರುದ್ದ ಭಾರತ ಸೇನೆಯ ಸೀಮಿತ ದಾಳಿ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ದೆಹಲಿಯ ನಾರ್ತಾರ್ ಬ್ಲಾಕ್ ನಲ್ಲಿ ಆಂತರಿಕ ಭದ್ರತೆ ವಿಚಾರ ಕುರಿತು ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಕೇಂದ್ರ ಗೃಹ ಇಲಾಖೆ, ರಕ್ಷಣೆ ಇಲಾಖೆಯ ಅಧಿಕಾರಿಗಳು ಹಾಗೂ ಸೇನೆ ಹಿರಿಯ ಅಧಿಕಾರಿಗಳ ಜೊತೆ ಆಂತರಿಕ ಭದ್ರತೆ ವಿಚಾರ ಕುರಿತು ಗಹನ ಸಮಾಲೋಚನೆ ನಡೆಸಿದರು.
ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ನಡೆದರೆ ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಿದರು. ಆಂತರಿಕ ಭದ್ರತೆ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳಿಂದ ಸಲಹೆ ಪಡೆದುಕೊಂಡರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ಕ್ಕೆ ನುಗ್ಗಿ ಭಾರತೀಯ ಸೇನೆಯು ಸೀಮಿತ ದಾಳಿ ನಡೆಸಿ 40ಕ್ಕೂ ಹೆಚ್ಚು ಭಯೋತ್ಫಾದಕರನ್ನು ಹೊಡೆದುರುಳಿಸಿದೆ. ಈ ದಾಳಿ ವಿರುದ್ಧ ಹೇಡಿ ಪಾಕಿಸ್ತಾನ ಯಾವ ಸಮಯದಲ್ಲಾದರೂ ಭಾರತದ ಮೇಲೆ ಆಕ್ರಮಣ ನಡೆಸಬಹುದು. ಇದಕ್ಕಾಗಿ ಪಾಕ್ಗೆ ತಿರುಗೇಟು ನೀಡಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆಂತರಿಕ ಭದ್ರತೆ ಬಗ್ಗೆ ಕೈಗೊಂಡಿರುವ ಕ್ರಮಗಳನ್ನು ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳ ದೀರ್ಘ ಚರ್ಚೆ ನಡೆಸಿದರು.
Discussion about this post