Read - < 1 minute
ನವದೆಹಲಿ, ಸೆ.30: 18 ವರ್ಷದೊಳಗಿನವರ ಏಷ್ಯಾ ಹಾಕಿ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನುಆತಿಥೇಯ ಭಾರತ 3-1 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.
ಪಂದ್ಯದ ಆರಂಭದಲ್ಲಿಯೇ ಮೇಲುಗೈ ಸಾಧಿಸಿದ ಪರಿಣಾಮ ಭಾರತ ಸುಲಭ ಗೆಲುವು ಪಡೆಯಲು ಸಾಧ್ಯವಾಯಿತು. ಆತಿಥೇಯ ಭಾರತ ಮೊದಲ ಅವಧಿಯ ಆಟ ಮುಗಿದಾಗ ಎರಡು ಗೋಲುಗಳನ್ನು ಹೊಡೆದಿತ್ತು. ನಂತರ ಎರಡನೆಯ ಅವಧಿಯಲ್ಲಿ ಭಾರತ ಮತ್ತೊಂದು ಗೋಲನ್ನು ಹೊಡೆದು ಮುನ್ನಡೆ ಪಡೆದುಕೊಂಡಿತು. ಪಂದ್ಯ ಮುಗಿಯಲು 10 ನಿಮಿಷ ಬಾಕಿ ಇರುವಾಗ ಪಾಕಿಸ್ತಾನ ಒಂದು ಗೋಲನ್ನು ಹೊಡೆಯುವಲ್ಲಿ ಮಾತ್ರ ಶಕ್ತವಾಯಿತು. ಶುಕ್ರವಾರ ಭಾರತ, ಬಾಂಗ್ಲಾದೇಶವನ್ನು ಫೈನಲ್ ಪಂದ್ಯದಲ್ಲಿ ಎದುರಿಸಲಿದೆ.
Discussion about this post