Read - < 1 minute
ಬೆಳಗಾವಿ/ನವದೆಹಲಿ: ಸೆ:30:ಭಾರತೀಯ ಕಮಾಂಡೋಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಅಟ್ಟಹಾಸ ಅಡಗಿಸಿದ್ದಾರೆ. ಈ ಸರ್ಜಿಕಲ್ ಕಾರ್ಯಾಚರಣೆ ನಡೆಸಿದ ಕಮಾಂಡೋಗಳು ತರಬೇತಿ ಪಡೆದಿದ್ದು ಕುಂದಾನಗರಿ ಬೆಳಗಾವಿಯ ಎಂಎಲ್ಆರಸಿ ಕಮಾಂಡೋ ತರಬೇತಿ ಶಾಲೆಯಲ್ಲಿ ಎನ್ನುವುದು ಕನ್ನಡಿಗರ ಹೆಮ್ಮೆ.
ಹೌದು. ಉರಿ ದಾಳಿ ನಡೆಸಿ ಭಾರತೀಯ ಯೋಧರ ನೆತ್ತರ ಹರಿಸಿದ್ದ 40ಕ್ಕೂ ಅಧಿಕ ಉಗ್ರರನ್ನ ಭಾರತೀಯ ಕಮಾಂಡೋಗಳು ಸರ್ಜಿಕಲ್ ಕಾರ್ಯಾಚರಣೆ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಈ ಕಮಾಂಡೋಗಳು ತರಬೇತಿ ಪಡೆದಿದ್ದು ಬೆಳಗಾವಿಯ ಮರಾಠಾ ಲಘು ಪದಾತಿ ದಳ ಅಂದ್ರೆ ಎಂಎಲ್ ಆರ್ ಸಿಯಲ್ಲಿ ಕಠಿಣ ತರಬೇತಿ ಪಡೆದವರಾಗಿದ್ದಾರೆ. ದೇಶದಲ್ಲಿ ಭಾರತೀಯ ಸೇನೆಯ ಎರಡನೇ ಮತ್ತು ಏಕೈಕ ಕಿರಿಯ ಕಮಾಂಡೋ ತರಬೇತಿ ಶಾಲೆ ಎಂಎಲಾರಸಿಯಲ್ಲಿದೆ. 1975ರಲ್ಲಿ ಪ್ರಾಂಭಗೊಂಡ ಕಮಾಂಡೋ ತರಬೇತಿ ಶಾಲೆಯಲ್ಲಿ 21 ವರ್ಷದೊಳಗಿನ ಕಮಾಂಡೋಗಳಿಗೆ ಕಠಿಣ ತರಬೇತಿ ನೀಡಲಾಗುತ್ತದೆ. 2014ರಲ್ಲಿ ಎಂಎಲ್ಆರ್ಸಿ ಬ್ರೀಗೆಡಿಯರ್ ಸಂತೋಷ ಕುರುಪ ಇದ್ದಾಗ ಕಿರಿಯ ಕಮಾಂಡೋಗಳ ನಿರ್ಗಮನ ಪಥ ಸಂಚಲನ ನಡೆದಿತ್ತು. ಆ ಕಮಾಂಡೋಗಳೇ ಸರ್ಜಿಕಲ್ ಕಾರ್ಯಾಚರಣೆ ಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇನ್ನು ದೇಶದ ಭದ್ರತೆ, ಸುರಕ್ಷತೆ ಮತ್ತು ಕಾರ್ಗಿಲ್ ಯುದ್ಧ ಸೇರಿದಂತೆ ವಿವಿಧ ಆಪರೇಷನ್ ಗಳಲ್ಲಿ ಬೆಳಗಾವಿಯ 130 ಸೈನಿಕರು ಹುತಾತ್ಮರಾಗಿದ್ದಾರೆ. ದೇಶದ ಗಡಿ ಪ್ರದೇಶದಲ್ಲಿ ಕನರ್ಾಟಕದ ಬೆಳಗಾವಿ ಜಿಲ್ಲೆ ಜಿಲ್ಲೆಯ ಸೇನಿಕ್ರೇ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಇನ್ನು ಬೆಳಗಾವಿಯಲ್ಲಿ ಎಂಎಲ್ಆರ್ಸಿ ಅಲ್ಲದೇ, ಮಹಾರ ರೇಜಿಮೆಂಟ್, ಇಂಡೋ-ಟಿಬೇಟಿಯನ್ ಹಾಗೂ ಇಂಡಿಯನ ಏಪರ್ೋಸರ್್ ಸೇನಾ ತರಬೇತಿ ಕೇಂದ್ರಗಳಿದ್ದು, ಇದು ದೇಶದ ಸೇನಾ ಬಲವನ್ನ ಗಟ್ಟಿಗೊಳಿಸಲು ಕೆಲ್ಸ ಮಾಡುತ್ತಿವೆ.
ಒಟ್ಟಿನಲ್ಲಿ ದೇಶದ ಸುರಕ್ಷತೆ ಹೆಚ್ಚಿಸಿದ ಭಾರತೀಯ ಕಮಾಂಡೋ ಪಡೆಗೆ ಬೆಳಗಾವಿಯ ಎಂಎಲಾರ್ಸಿ ಭದ್ರ ಬುನಾದಿ ಹಾಕಿಕೊಟ್ಟಿದೆ.
Discussion about this post