ಬೆಂಗಳೂರು: ಸೆ:17:ಕಾವೇರಿ ನದಿ ನೀರು ಹಂಚಿಕೆ ವಿಚಾರ ಹಾಗೂ ರಾಜ್ಯದ ಜನತೆ ಎದುರುತ್ತಿರುವ ಆತಂಕದ ಪರಿಸ್ಥಿತಿ ಕುರಿತಂತೆ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರಿಗೆ ಪತ್ರ ಬರೆದಿದ್ದಾರೆ.
ಸುಪ್ರೀಂಕೋಟರ್್ ಆದೇಶದ ಹಿನ್ನೆಲೆಯಲ್ಲಿ ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದರಿಂದ ರಾಜ್ಯದ ಜನ ಎದುರಿಸುತ್ತಿರುವ ಆತಂಕವನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಇಂದು ಪತ್ರ ಬರೆದಿರುವ ಈಶ್ವರಪ್ಪ, ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಕೇಂದ್ರ ಸಚಿವರಾದ ಉಮಾ ಭಾರತಿ ಮುಂದೆ ಬಂದಿದ್ದಾರೆ. ಹೀಗೆಯೇ ಮೂವರೂ ಹಿರಿಯ ನಾಯಕರು ಸೇರಿ ರಾಜ್ಯದ ಜನರ ಅತಂಕವನ್ನು ದೂರ ಮಾಡಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಸೆ. 5 ಹಾಗೂ 12 ರಂದು ಸವರ್ೋಚ್ಚ ನ್ಯಾಯಾಲಯ ನೀಡಿದ ತೀಪರ್ಿನ ಹಿನ್ನೆಲೆಯಲ್ಲಿ ಕನರ್ಾಟಕದ ಕಾವೇರಿ ನದಿ ಪಾತ್ರದಲ್ಲಿ ಆತಂಕದ ಸ್ಥಿತಿ ಉಂಟಾಗಿದೆ.ಇದನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರುವಂತೆ ಹಿರಿಯ ಪತ್ರಕರ್ತರು ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು. ಕಾವೇರಿ ನದಿ ನೀರಿನ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿರುವುದು ಬೇರೆ ವಿಷಯ.ಆದರೆ ಪದೇ ಪದೇ ಸುಪ್ರೀಂಕೋಟರ್್ ಕನರ್ಾಟಕದ ವಿರುದ್ಧವಾಗಿ ಯಾಕೆ ತೀಪರ್ು ನೀಡುತ್ತಿದೆ?ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದರು.
ಕನರ್ಾಟಕದ ಕಾವೇರಿ ಕಣಿವೆ ಪ್ರದೇಶದಲ್ಲಿ ಲಭ್ಯವಿರುವ ನೀರು ಎಷ್ಟು ಎಂಬುದು ಗೊತ್ತು.ಅದೇ ರೀತಿ ತಮಿಳುನಾಡು ತನ್ನಲ್ಲಿರುವ ಸಾಂಬಾ ಬೆಳೆಗೆ ನೀರು ಕೇಳುತ್ತಿದೆ ಎಂಬುದೂ ಗೊತ್ತು.ಆದರೂ ಕನರ್ಾಟಕಕ್ಕೆ ವ್ಯತಿರಿಕ್ತವಾಗಿ ತೀಪರ್ು ಬರಲು ಏನು ಕಾರಣ ಅನ್ನುವುದು ತಿಳಿಯುತ್ತಿಲ್ಲ ಎಂದರು.
ಇದರಿಂದಾಗಿ ರಾಜ್ಯದ ಜನತೆ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಅವರಿಗೆ ತುತರ್ು ಪತ್ರ ಬರೆದು ಜನರ ಆತಂಕವನ್ನು ಅವರ ಗಮನಕ್ಕೆ ತರುತ್ತೇನೆ ಎಂದರು. ಮಹಾರಾಷ್ಟ್ರದ ಲಾತೂರ್ನಲ್ಲಿ ಇತ್ತೀಚೆಗೆ ಸಂಭವಿಸಿದ ಜಲಕ್ಷಾಮದ ಹಿನ್ನೆಲೆಯಲ್ಲಿ ಜನ ಹನಿ ನೀರಿಗೂ ಪರದಾಡುವಂತಾಯಿತು.ಅಂತಹ ಸ್ಥಿತಿ ಕನರ್ಾಟಕಕ್ಕೆ ಬರುವುದು ಬೇಡ. ಈ ಪರಿಸ್ಥಿತಿ ಶಾಂತಿಯುತವಾಗಿ ಇತ್ಯರ್ಥವಾಗುವಂತೆ ಮಾಡಬೇಕು ಎಂದು ಹೇಳಿದರು.
Discussion about this post