Read - < 1 minute
ನವದೆಹಲಿ: ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಾಗಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಆರು ವ್ಯಕ್ತಿಗಳು ಹಣ ಒದಗಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಶಂಕೆ ವ್ಯಕ್ತಪಡಿಸಿದೆ.
ಉರಿ ದಾಳಿಯ ಮೂರು ವಾರಗಳ ಮೊದಲು ಶ್ರೀನಗರದ ನ್ಯಾಯಾಲಯವೊಂದರಲ್ಲಿ ಇ.ಡಿ. ಚಾಜರ್್ಶೀಟ್ ಒಂದನ್ನು ಸಲ್ಲಿಸಿತ್ತು. ಪಿಒಕೆಯಲ್ಲಿ ನೆಲೆಸಿರುವ ವ್ಯಕ್ತಿಗಳಿಂದ ಹಣ ಪಡೆಯಲು ಫಿದರ್ೋಸ್ ಅಹ್ಮದ್ ಶಾ ಮತ್ತು ಯಾರ್ ಮೊಹಮ್ಮದ್ ಖಾನ್ ಎಂಬ ಇಬ್ಬರು ಹುರಿಯತ್ ಪ್ರತ್ಯೇಕತವಾದಿಗಳು ಮದಿನಾ ಟ್ರೇಡಿಂಗ್ ಎಂಬ ಇಟೆಲಿಯ ಸಂಸ್ಥೆಯೊಂದನ್ನು ಬಳಸಿಕೊಂಡಿದ್ದಾರೆ ಎಂದು ಚಾಜರ್್ಶೀಟ್ನಲ್ಲಿ ಆರೋಪಿಸಲಾಗಿದೆ. ಮದಿನಾ ಟ್ರೇಡಿಂಗ್ ಇಟೆಲಿಯ ಬ್ರೆಸಿಯಾದಲ್ಲಿನ ಕೊಸರ್ೊ ಗರಿಬಲ್ಡಿಯ ಹೊರಗೆ ನೆಲೆ ಹೊಂದಿದೆ. ಶಾ ಒಬ್ಬ ಪ್ರಬಾವಿ ಪತ್ಯೇಕತಾವಾದಿ ನಾಯಕನಾಗಿದ್ದು ಸಯ್ಯದ್ ಅಳಿಸಾ ಗೀಲಾನಿಯ ಹುರಿಯತ್ ಕಾನರೆನ್ಸ್ನ ಒಂದು ಘಟಕವಾಗಿರುವ ಡೆಮ್ರೊಕೆಟಿಕ್ ಪೊಲಿಟಿಕಲ್ ಮೂವ್ಮೆಂಟ್ನ ಮುಖ್ಯಸ್ಥನಾಗಿದ್ದಾನೆ ಎಂದು ವರದಿಯಾಗಿದೆ.
ಆ ಇಬ್ಬರು ಪ್ರತ್ಯೇಕತಾವಾದಿಗಳು ಹಣ ಅಕ್ರಮ ವಗರ್ಾವಣೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದು, ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸುವಲ್ಲಿ ಸಕ್ರಿಯರಾಗಿದ್ದಾರೆ ಎಂದು ಇ.ಡಿ. ಹೇಳಿದೆ.
ಶಾ ಮತ್ತು ಖಾನ್ ಮೇಲೆ ಭಾರತ ದೇಶದ ವಿರುದ್ಧ ಯುದ್ಧ ಹೂಡಿದ ಆರೋಪವೂ ಇದೆ.
ಇದಕ್ಕಿಂತಲೂ ಹೆಚ್ಚು ಆಘಾತಕರ ಸಂಗತಿ ಏನೆಂದರೆ, 2008ರಲ್ಲಿ 26/11ರ ಮುಂಬೈ ಧಾಲಿಕೋರರಿಗಾಗಿ ವಿಒಐಪಿ ಖಾತೆಯೊಂದನ್ನು ಸೃಷ್ಟಿಸಲು ಕೂಡಾ ಮದಿನಾ ಟ್ರೇಡಿಂಗ್ ಕಂಪೆನಿಯನ್ನೇ ಬಳಸಲಾಗಿತ್ತು ಎಂಬುದು.
Discussion about this post