ಶ್ರೀನಗರ: ಅ:8: ಕಾಶ್ಮೀರದಲ್ಲಿ ಮತ್ತೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಪ್ರತ್ಯೇಕತಾವಾದಿ ಪ್ರೇರಿತ ಕಾಶ್ಮೀರ ಹಿಂಸಾಚಾರದ ನೆಲೆಗಳಾದ ದಕ್ಷಿಣ ಕಾಶ್ಮೀರದ ಅನಂತನಾಗ್, ಕುಲ್ಗಾಮ್ , ಶೋಪಿಯಾನ್, ಪುಲ್ವಾಮಾ ಜಿಲ್ಲೆಗಳಲ್ಲಿ ವಾರವೊಂದರಲ್ಲೇ 446ಮಂದಿಯನ್ನು ಬಂಧಿಸುವ ಮೂಲಕ ಈ ವರೆಗೆ ಒಟ್ಟು 1821ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ 500ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿದೆ. ಈ ಮೂಲಕ ಪ್ರತ್ಯೇಕತಾವಾದಿ ಹಿಂಸಾಚಾರಕ್ಕೆ ತಾನು ಬಗ್ಗಲಾರೆ ಎಂಬ ಕಠಿನ ಸಂದೇಶವನ್ನೇ ಕೇಂದ್ರ ನೀಡಿದೆ.
ರಾಜ್ಯ ಸರಕಾರದ ಅಂಕಿ-ಅಂಶಗಳ ಪ್ರಕಾರ ಈ ವಾರದಲ್ಲಿ ಜಮ್ಮು-ಕಾಶ್ಮೀರದಲ್ಲಿ 446ಮಂದಿಯನ್ನು ಬಂಧಿಸಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಗುಂಪಿನ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿಯನ್ನು ಜು.8ರಂದು ಕಾಯರ್ಾಚರಣೆಯಲ್ಲಿ ಕೊಂದದ್ದರಿಂದ ಭಾರೀ ಹೊಡೆತ ತಿಂದ ಪ್ರತ್ಯೇಕತಾವಾದಿಗಳಿಗೆ ಕಾಶ್ಮೀರ ಕಣಿವೆಯಲ್ಲಿ ವ್ಯಾಪಕ ಹಿಂಸಾಚಾರದಲ್ಲಿ ತೊಡಗುವಂತೆ ಪಾಕಿಸ್ಥಾನ ಕುಮ್ಮಕ್ಕು ಮತ್ತು ನೆರವನ್ನು ನೀಡಿತ್ತು. ಇದೀಗ ಸುಮಾರು 90ದಿನಗಳಿಂದ ಅಲ್ಲಿ ಇಂತಹ ಸ್ಥಿತಿ ನೆಲೆಸಿದ್ದು, ಕೇಂದ್ರ ಸರಕಾರ , ತಾನು ಕಾಶ್ಮೀರಿ ಜನತೆಯ ನ್ಯಾಯಯುತ ಅಳಲಿಗೆ ಸ್ಪಂದಿಸಲು ಸಿದ್ಧ. ಆದರೆ ಹಿಂಸಾಚಾರ ಮತ್ತು ಪಾಕ್ ಪ್ರಾಯೋಜಿತ ಹಿಂಸಾಚಾರದಲ್ಲಿ ತೊಡಗಿದಲ್ಲಿ ಅದಕ್ಕೆ ಸೊಪ್ಪು ಹಾಕಲಾರೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ.
ನ್ಯಾಶನಲ್ ಕಾನ್ಫರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ, ಮುಖ್ಯಮಂತ್ರಿ ಮೆಹಬೂಬ ಮುಫ್ತಿ ನೇತೃತ್ವದ ಸರಕಾರ 7000ಯುವಕರನ್ನು ಬಂಧಿಸಿ ದಬ್ಬಾಳಿಕೆಯಲ್ಲಿ ದಾಖಲೆ ಮಾಡಿದೆ ಎಂದಿದ್ದರೆ, ಶಿಕ್ಷಣ ಸಚಿವ ನಯೀಮ್ ಅಖ್ತರ್ , ಅಸಾಧಾರಣ ಸನ್ನಿವೇಶದಡಿ ಇದು ಅನಿವಾರ್ಯವಾಗಿದೆ ಎಂದು ಸಮಥರ್ಿಸಿದ್ದಾರೆ.
Discussion about this post