ಬೆಳಗಾವಿ: ಅ:8: ನಾಯಕ ನಟರು ರಿಯಾಲಿಟಿ ಶೋ ಮಾಡುವುದನ್ನು ವಿರೋಧಿಸುವುದು ಸರಿಯಲ್ಲ ಎಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಮಥರ್ಿಸಿಕೊಂಡಿದ್ದಾರೆ.
ದೊಡ್ಮನೆ ಹುಡ್ಗ ಚಿತ್ರ ವೀಕ್ಷಿಸಿದ ಅಭಿಮಾನಿಗಳ ಪ್ರೀತಿಯ ಕರೆಗೆ ಓಗೊಟ್ಟು ನಗರಕ್ಕೆ ಬಂದಿದ್ದ ವೇಳೆ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಕನ್ನಡ ಚಿತ್ರರಂಗದ ನಟನಟಿಯರು ರಿಯಾಲಿಟಿ, ಕಿರುತೆರೆಯ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ವಿತರಕರು, ನಿಮರ್ಾಪಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನೊಬ್ಬ ಕಲಾವಿದ ಜೊತೆಗೆ ರಿಯಾಲಿಟಿ ಶೋಗಳನ್ನು ಮಾಡಿದ್ದೇನೆ. ಇದರಲ್ಲಿ ತಪ್ಪೇನಿಲ್ಲ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ನಟರು ರಿಯಾಲಿಟಿ ಶೋ ಮಾಡುವುದನ್ನು ಯಾರೂ ಕೂಡ ವಿರೋಧಿಸಬಾರದು ಎಂದು ಮನವಿ ಮಾಡಿದರು.
ಒಂದು ವೇಳೆ ನಾವು ರಿಯಾಲಿಟಿ ಶೋ ಮಾಡುವುದನ್ನು ಯಾರಾದರೂ ವಿರೋಧಿಸಿದರೆ ಅದು ತಪ್ಪು ಎಂದು ಪುನೀತ್ ಹೇಳಿದರು.
Discussion about this post