” Fill the brain with high thoughts, highest ideals, place them day and night before you and out of that will come great work. ” ಸ್ವಾಮಿ ವಿವೇಕಾನಂದರ ಈ ಮಾತು ಆ ವ್ಯಕ್ತಿಯ ಕೈಯಲ್ಲಿದ್ದ ಪುಸ್ತಕದಲ್ಲಿ ರಾರಾಜಿಸುತ್ತಿತು. ಆ ವ್ಯಕ್ತಿಯ ಪಕ್ಕದಲ್ಲಿಯೇ ಆತನ ಸ್ನೇಹಿತ mobile game ನಲ್ಲಿ ಮುಳುಗಿದ್ದ. ಇವರಿಬ್ಬರ ಜೋಡಿ ಕುತೂಹಲವೆನಿಸಿ, ಅವರನ್ನು ಗಮನಿಸಬೇಕು ಅನಿಸಿತು. ಆ mobile ಹುಡುಗ ತನ್ನ ಗೆಳೆಯನಿಗೊಂದು ಕುಹಕ ನಗೆ ಬೀರಿ ‘ ಏನೋ philosophy ಓದುತ್ತಿದ್ದೀಯಾ, ನಾಳೆ ನೀನು ಸನ್ಯಾಸಿ ಆಗುವ plan ಇದ್ಯಾ? ‘ ಎಂದನು. ಸ್ವಾಮಿ ವಿವೇಕಾನಂದರ ಉಕ್ತಿಗಳ ಪುಸ್ತಕ ಇದು. ನನಗೆ ಜೀವನ ಮೌಲ್ಯವನ್ನು ತಿಳಿಸುತ್ತದೆ. ಇದರ ಬಗ್ಗೆ ಹಗುರವಾಗಿ ಮಾತನಾಡಬೇಡ ಎಂದನು ಆತನ ಗೆಳೆಯ. ಈಗಿನ ಕಾಲದಲ್ಲಿ philosophy ಅಂತೆ ಎಂದು ಜೋರಾಗಿ ನಕ್ಕು ಮತ್ತೆ ತನ್ನದೇ mobile ಪ್ರಪಂಚ ಹೊಕ್ಕನು mobile ಪ್ರೇಮಿ. ವಿಚಿತ್ರ ಎನಿಸಿತು. ಹೌದು ನಾವೇಕೆ ನಮಗೆ ತಿಳುವಳಿಕೆ ನೀಡುವ ಅಮೃತವನ್ನು ನಿರಾಕರಿಸುತ್ತೇವೆ?
ಮೊನ್ನೆ ನಾವು ಸ್ವಾತಂತ್ರ್ಯ ದಿನವನ್ನು ಎಷ್ಟು ಅದ್ದೂರಿಯಾಗಿ ಆಚರಿಸೆದೆವು ಅಲ್ಲವೇ? ಗಾಂಧೀಜಿ, ನೆಹರು, ಆಝಾದ್, ಮುಂತಾದವರ ಬಗ್ಗೆ ಹಾಡಿ ಹೊಗಳಿದೆವು. ಸಿಹಿ ತಿಂದು ಮನೆಗೆ ಹೋದೆವು. ಅಲ್ಲವೇ? ಮರುದಿನ BBMP ಯ ಪೌರ ಕಾರ್ಮಿಕರು ಕಸದ ಬುಟ್ಟಿಗೆ ಎಸೆದ ಆಚರಣೆಯ ಕುರುಹು ಬಿಟ್ಟರೆ, ಆಚರಣೆಯ ಪ್ರತಿಫಲ ಶೂನ್ಯ. ಮಹಾತ್ಮರ ಜೀವನ ತತ್ವಗಳು ಕೇವಲ ಅವರ ಭಾವಚಿತ್ರಗಳಿಗೆ ಭೂಶಿತ. ಆದರೆ ಅವು ನಮ್ಮ ಮನದಲ್ಲಿ ಜಾಗ ಪಡೆಯಲಾಯಿತೇ?
ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನಾ
ಮಾ ಕರ್ಮ ಫಲ ಹೇತುರ್ಭುಃ ಮಾ ತೇ ಸಂಗೋತ್ಸ್ವಕರ್ಮಣಿ..
ಫಲಾಫಲಗಳ ಆಸೆ ತ್ಯಜಿಸಿ ಕೆಲಸದಲ್ಲಿ ನಿರತನಾಗು ಎನ್ನುವ ಕೃಷ್ಣನ ಮಾತುಗಳು ದೇವರ ಮನೆಯಲ್ಲಿ ಭದ್ರ ತಾನೇ? ನಾವು ಮಾಡುವ ಕೆಲಸಕ್ಕಿಂತ ಹೆಚ್ಚಿನ ಪ್ರತಿಫಲದ ಅಪೇಕ್ಷೆ ಅಲ್ಲವೆ?
Failure will never overtake me. If my definition to success is strong enough. ಅಬ್ಬುಲ್ ಕಲಾಂ ಹೇಳಿದ ಈ ಮಾತುಗಳು ವಿದ್ಯಾರ್ಥಿ ಜೀವನದ ದಾರಿ ದೀಪ. ಜೀವನದಲ್ಲಿ ಸೋಲನ್ನು ಕಂಡಾಗ ಇಂತಹ ನುಡಿ ಆಶಾ ಕಿರಣಗಳು.
ನಮಗೆಲ್ಲಾ ಗೊತ್ತು, ಭಾರತದಲ್ಲಿ ಸಂಸ್ಕೃತಿ, ಸಂಸ್ಕಾರ, ಮೌಲ್ಯ, ತತ್ವ ಗಳಿಗೆ ಕೊರತೆಯಿಲ್ಲ. ಅವುಗಳನ್ನು ಪಾಲಿಸುವುದು ಹೇರಿಕೆಯೂ ಅಲ್ಲ. ದಿನ ಬೆಳಗಾದರೆ ಕೊಲೆ ಸುಲಿಗೆ ಅನ್ಯಾಯ ಅತ್ಯಾಚಾರ ಮಾನಭಂಗ ಇವುಗಳ ಬಗ್ಗೆ ಕೇಳುತ್ತೇವೆ. ಬದಲಾಗಿ ನಾವು ಯಶಸ್ಸಿನ ವಾರ್ತೆ ಕೇಳುವುದು ಯಾವಾಗ? ನಮ್ಮಲ್ಲಿಯ ಅರಿಶಡ್ವರ್ಗಗಳನ್ನು ಕೊಂದು ಸ್ವಾರ್ಥ ಭ್ರಷ್ಟಾಚಾರಗಳನ್ನು ಅದರ ಜೊತೆ ಮಣ್ಣು ಮಾಡಲು ನಮಗೆ ತತ್ವ ಮೌಲ್ಯಗಳ ಸಹಾಯ ಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ವ್ಯಕ್ತಿಯ ತತ್ವ, ವ್ಯಕ್ತಿತ್ವ ಮುಖ್ಯ.
ಅ) ಅಹಿಂಸಾ ಪರಮೋ ಧರ್ಮಃ ಈ ತತ್ವವನ್ನು ಆಚರಣೆಗೆ ತಂದು ಹಿಂಸೆಯನ್ನು ಬಿಡುವುದು ದೊಡ್ಡ ಕೆಲಸ ಅಲ್ಲ ಅಲ್ಲವೇ! ಕೋಪ ಅಸೂಯೆ ನಮ್ಮ ಹಿಡಿತದಲ್ಲಿ ಇದ್ದರೆ ಸಾಕು.
ಆ) ಮನದಾಳದ ಮೂಲೆಯಲ್ಲಿನ Respect women, she is your sole, she is your life, she is your success ಎಂಬ ತತ್ವಕ್ಕೆ ಧೂಳು ಹೊಡೆದರೆ ಸಾಕು ಸ್ರೀ ಶೋಷಣೆ ಇತಿಹಾಸವಾಗುತ್ತದೆ.
ಇ) ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲಾಲ್ ಬಹದ್ದೂರ್ ಶಾಸ್ರೀ ಮುಂತಾದವರ ಜೀವನವೇ ಆದರ್ಶವಾಗಿರುವಾಗ ಅದರ ಪರಿಪಾಲನೆ ಕಷ್ಟವೇ? ಬುದ್ಧನ ಆಸೆಯೇ ದುಃಖಕ್ಕೆ ಮೂಲ ಎಂಬ ತತ್ವದ ನೆನಪು ಲಂಚ ಪಡೆಯುವಾಗ ಆದರೆ ದೇಶದ ಪ್ರಗತಿ ಸಾಧ್ಯ.
ಸಮಸ್ಯೆ ಎಂದಿಗೂ ದೊಡ್ಡದಲ್ಲ.ಪರಿಹಾರ ನಮ್ಮ ಕೈಯಲ್ಲಿ ಇದೆ. ಬುದ್ಧ ಎಂದಾಗ ನೆನಪಾಯಿತು ನೋಡಿ ಈ ಕಥೆ. ಒಮ್ಮೆ ಒಬ್ಬ ಧನಿಕ ಬುದ್ಧನ ಬಳಿ ಬಂದು ಸ್ವಾಮಿ ನಾನು “ಸ್ವರ್ಗಕ್ಕೆ ಹೋಗಬೇಕು ಕಳಿಸುವಿರಾ?” ಎಂದನು. ಅದಕ್ಕೆ ಬುದ್ಧ ” ನಾನು ಹೋದರೆ ಹೋಗಬಹುದು” ಎಂದನು. ಧನಿಕನು ಬೇಸರದಿಂದ ” ನೀವು ಮಹಾತ್ಮರು ಸ್ವರ್ಗಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ, ಆದರೆ ನಾನು ಹೋಗಬಯಸುತ್ತೇನೆ ಕಳುಹಿಸುವಿರಾ? ” ಎಂದು ಕೇಳಿಕೊಂಡನು. ಹೀಗೆ ಎಷ್ಟೇ ಬಾರಿ ಬೇಡಿದರು ಬುದ್ಧ ” ನಾನು ಹೋದರೆ ಹೋಗಬಹುದು ” ಎಂದು ಉತ್ತರಿಸುತ್ತಿದ್ದರು. ನಾನು ಎಂಬ ಅಹಂಕಾರ ಹೋದರೆ ಸ್ವರ್ಗವೇ ಸಿಗುವುದಂತೆ. ನಾವು ಅಹಂಕಾರ ಬಿಟ್ಟರೆ ನೆಮ್ಮದಿಯ ಜೀವನವಾದರೂ ಸಿಗುವುದಿಲ್ಲವಾ? ತತ್ವಗಳು ಧೂಳು ಹಿಡಿದ ಪುಸ್ತಕದಲ್ಲಿರಬೇಕೆ ಅಥವಾ ಜಾರಿಯಲ್ಲಿ ಬರಬೇಕೆ? ಏನೆನ್ನುತ್ತೀರಿ?
Discussion about this post