Read - < 1 minute
ನವದೆಹಲಿ, ಸೆ.10: ದೇಶದ ಪ್ರತಿಷ್ಠಿತ ದೆಹಲಿ ವಿವಿ(ಡಿಎಸ್‌ಡಿಯು) ವಿದ್ಯಾರ್ಥಿ ಸಂಘಕ್ಕೆ ನಿನ್ನೆ ನಡೆದಿದ್ದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅಖಿಲ ಭಾರತೀ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಜಯಭೇರಿ ಭಾರಿಸಿದ್ದಿ, ಎನ್‌ಎಸ್‌ಯುಐ ಹಾಗೂ ಸಿವೈಎಸ್‌ಎಸ್‌ಗೆ ಭಾರೀ ಮುಖಭಂಗವಾಗಿದೆ.
ಇಂದು ಫಲಿತಾಂಶ ಪ್ರಕಟವಾಗಿದ್ದು ೪ ಸ್ಥಾನಗಳ ಪೈಕಿ ಎಬಿವಿಪಿ ಮೂರರನ್ನು ಜಯ ಸಾಧಿಸಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಅಮಿತ್ ತಂವರ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಪ್ರಿಯಾಂಕಾ ಚಾಬ್ರಿ ಆಯ್ಕೆಯಾಗಿದ್ದಾರೆ. ಒಂದು ಸ್ಥಾನವನ್ನು ಗೆದ್ದಿರುವ ಎನ್‌ಎಸ್‌ಯುಐ ಉಪಕಾರ್ಯದರ್ಶಿ ಹುದ್ದೆಗೆ ಜಯ ಸಾಧಿಸಿದ್ದಾರೆ.
ನಿನ್ನೆ ನಡೆದ ವಿವಿಯ ೫೧ ಕಾಲೇಜುಗಳ ೧,೨೩,೨೪೧ ವಿದ್ಯಾರ್ಥಿ ಮತದಾರರು ಮತ ಚಲಾಯಿಸಿದ್ದರು.
Discussion about this post