ನವದೆಹಲಿ, ಅ.28: ಭಾರತೀಯ ಸೇನೆ ನಡೆಸುವ ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಸೇನೆ ಸರ್ಕಾರಕ್ಕೆ ಉತ್ತರದಾಯಿಯಾಗಿರಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಸ್ವೇಚ್ಛಾಚಾರದ ಆವೇಶದಲ್ಲೇ ದೇಶದಲ್ಲಿ ಸೇನಾಡಳಿತ ಜಾರಿಗೆ ಬಂದೀತು ಎಚ್ಚರಿಕೆ ಎಂದು ಕಠಿಣ ಮಾತುಗಳಲ್ಲಿ ಹೇಳಿದೆ.
ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಸೇನೆಯ ಯಾವುದೇ ಕ್ರಮಗಳನ್ನು ಹಾಗೂ ಕಾರ್ಯಗಳನ್ನು ಸರ್ಕಾರ ತನ್ನ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳದಂತೆ ನಿರ್ಬಂಧ ಹೇರಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ ಈ ಮೇಲಿನಂತೆ ಎಚ್ಚರಿಕೆ ನೀಡಿದೆ.
ಸರ್ಜಿಕಲ್ ಸ್ಟ್ರೈಕ್ ಕುರಿತಾಗಿ ಹೇಳಿರುವ ನ್ಯಾ.ಅಮಿತವ್ ರಾಯ್ ಹಾಗೂ ಯು.ಯು. ಲಲಿತ್ ಅವರನ್ನೊಳಗೊಂಡ ಪೀಠ, ಸೇನೆ ಸರ್ಕಾರಕ್ಕೆ ಉತ್ತರದಾಯಿಯಾಗಿರುತ್ತದೆ ಹಾಗೂ ಉತ್ತರದಾಯಿಯಾಗಿರಬೇಕು. ಇಲ್ಲದೇ ಹೋದಲ್ಲಿ, ಸೇನೆಯಲ್ಲಿ ಸ್ವೇಚ್ಛಾಚಾರದ ಪ್ರವೃತ್ತಿ ಬೆಳೆಯುತ್ತದೆ. ಇದು ಮುಂದೊಂದು ದಿನ ಸೇನಾಡಳಿತ(ಮಾರ್ಷಲ್ ಲಾ) ಜಾರಿಜಗೆ ಕಾರಣವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.
ಇದೇ ವೇಳೆ ರಾಷಟ್ಪೆತಿಯವರು ಸೇನಾ ಪ್ರಧಾನದಂಢನಾಯಕರಾಗಿರುವ ಹಿನ್ನೆಲೆಯಲ್ಲಿ ಸೇನೆಯ ಅವರಿಗೆ ಉತ್ತರದಾಯಿಯಾಗಿರಬೇಕು ಎನ್ನುವ ಅಂಶವನ್ನೂ ಸಹ ಸ್ಪಷ್ಟಪಡಿಸಿದೆ.
Discussion about this post